ಲಕ್ನೋ: ಲಖಿಂಪುರ ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಘಟನೆಯನ್ನು ಮರುಸೃಷ್ಟಿಸುವ ಭಾಗವಾಗಿ ಆರೋಪಿ ಆಶಿಶ್ ಮಿಶ್ರಾ ಅವರನ್ನು ಘಟನಾ ಸ್ಥಳಕ್ಕೆ ಕರೆತಂದು ಪರಿಶೀಲನೆ ನಡೆಸಿದ್ದಾರೆ.
ಈ ಹಿಂದೆ ಲಖಿಂಪುರ ಹಿಂಸಾಚಾರದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರಿಗೆ ಸೇರಿದ ಕಾರು ಹರಿದು ನಾಲ್ವರು ರೈತರು ಮೃತಪಟ್ಟಿದ್ದರು.
ರೈತರ ಹತ್ಯೆಯ ಆರೋಪಿ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ನನ್ನು ಆತನ ಸ್ನೇಹಿತ ಮತ್ತು ಸಹ ಆರೋಪಿ ಅಂಕಿತ್ ದಾಸ್ ನೊಂದಿಗೆ ಪೊಲೀಸರು ಕರೆದು ತಂದಿದ್ದಾರೆ. ಘಟನೆಗಳನ್ನು ಮರುಸೃಷ್ಟಿಸಲು ಪೊಲೀಸರ ಕಾರುಗಳನ್ನು ಬಳಸಲಾಗಿದೆ.