ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ನೇಮಕ ಮಾಡಿಲ್ಲ ಎಂದು ಉ.ಪ್ರ ದ ಏಳು ನ್ಯಾಯಾಧೀಶರು ಸುಪ್ರೀಂಕೋರ್ಟಿಗೆ !

Prasthutha: September 17, 2020

ನವದೆಹಲಿ: ಯುಪಿಯ ಏಳು ಮಂದಿ ನ್ಯಾಯಾಧೀಶರುಗಳು ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರಾಗಿ ತಮ್ಮನ್ನು ಪರಿಗಣಿಸದಿರುವುದರ ವಿರುದ್ಧ ಸುಪ್ರೀಂಕೋರ್ಟ್ ನ ಮೊರೆ ಹೋಗಿದ್ದಾರೆ. ತಮ್ಮನ್ನು ಸಹ ಪರಿಗಣಿಸಲು ಕೊಲಿಜಿಯಂಗೆ ಸೂಚನೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ನ್ಯಾಯಾಧೀಶರುಗಳ  ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎಸ್.ಎ ಬೊಬ್ಡೆ ಅವರು ಫೈಲ್ ನಲ್ಲಿ ಸ್ವೀಕರಿಸಿ ಅಲಹಾಬಾದ್ ಹೈಕೋರ್ಟ್ ನ ಪ್ರಧಾನ ಕಾರ್ಯದರ್ಶಿ ಮತ್ತು ಕಾನೂನು ಇಲಾಖೆಗೆ ನೋಟೀಸು ಕಳುಹಿಸಿದ್ದಾರೆ. ನಾಲ್ಕು ವಾರಗಳಲ್ಲಿ ಪ್ರತಿಕ್ರಿಯಿಸಲು ಕೋರಲಾಗಿದೆ.

  ಅರ್ಜಿದಾರರು ಆಗಸ್ಟ್ 14ರ ಸುಪ್ರೀಂ ಕೋರ್ಟಿನ ಕೊಲಿಜಿಯಂ ಶಿಫಾರಸ್ಸಿನಲ್ಲಿ ಪರಿಗಣಿಸಲಾಗಿಲ್ಲ ಎಂದು ಸೂಚಿಸಿದ್ದಾರೆ. ತಮಗೆ ಹೈಕೋರ್ಟ್ ನ್ಯಾಯಾಧೀಶರಾಗಿ ಭಡ್ತಿ ಕೊಡಬೇಕೆಂದು ಅವರು ಒತ್ತಾಯಿಸಿದ್ದಾರೆ. ಇಂತಹಾ ಬೇಡಿಕೆ ಸುಪ್ರೀಂಕೋರ್ಟು ಮುಂದೆ ಬಂದಿರುವುದು ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಇದೇ ಮೊದಲು ಎಂದು ಹೇಳಲಾಗಿದೆ. “ಇದೊಂದು ಹೊಸ ಘಟನೆಯಾಗಿದೆ. ನ್ಯಾಯಾಧೀಶರಾಗಿ ನ್ಯಾಯಾಲಯಕ್ಕೆ ಬಂದು ತಮ್ಮನ್ನು ಮುಖ್ಯ ನ್ಯಾಯಾಧೀಶರನ್ನಾಗಿ ನೇಮಿಸುವಂತೆ ಹೇಳುವುದು ನನ್ನ ಅರಿವಿನಲ್ಲಿ ಇಲ್ಲ, ಇದು ಸರಿಯೆಂದು ನನಗೆ ಕಾಣುವುದಿಲ್ಲ.” ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ ಬೊಬ್ಡೆ ಹೇಳಿದರು.

 ಆದರೆ ಮುಖ್ಯ ನ್ಯಾಯಾಧೀಶರು ದೂರುದಾರರ ವಿಚಾರಣೆಗೆ ಅವಕಾಶ ನೀಡಿದರು. ಹೈಕೋರ್ಟು ಕೊಲಿಜಿಯಂ ತಮ್ಮ ಹೆಸರನ್ನು ಶಿಫಾರಸ್ಸು ಮಾಡಿದರೂ ಸುಪ್ರೀಂ ಕೋರ್ಟು ಕೊಲಿಜಿಯಂ ಇದನ್ನು ಪರಿಗಣಿಸಲಿಲ್ಲ ಮತ್ತು ಜಿಲ್ಲಾ ನ್ಯಾಯಾಧೀಶರಾದ ಸುಭಾಷ್ ಚಂದ್ ಅವರನ್ನು ಮಾತ್ರ ನ್ಯಾಯಾಧೀಶರನ್ನಾಗಿ ನೇಮಿಸಿದೆ ಎಂಧು ಅವರು ಅರ್ಜಿಯಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಸುಭಾಶ್ ಚಂದ್ ರವರ ಅದೇ ಬ್ಯಾಚ್ ನಲ್ಲಿ ನಾವು ನ್ಯಾಯಾಧೀಶರಾಗಿದ್ದೇವೆ, ನಮ್ಮ ಹೆಸರನ್ನು ಶಿಫಾರಸ್ಸಿನಲ್ಲಿ ಸೇರಿಸದೆ ಇರುವುದು ನ್ಯಾಯವಲ್ಲ ಎಂದು ಏಳು ಜನರೂ ಸೂಚಿಸಿದ್ದಾರೆ

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!