ಹುಸಿಯಾದ ಸರಕಾರದ ಭರವಸೆ । 30ವರ್ಷಗಳಿಂದ ಸ್ಥಗಿತಗೊಂಡ ಸೇತುವೆ ನಿರ್ಮಿಸಿದ ಗ್ರಾಮಸ್ಥರು !

Prasthutha|

ಗಯಾ: ಮೂವತ್ತು ವರ್ಷಗಳಿಂದ ನಿರ್ಮಿಸದೇ ಬಾಕಿಯುಳಿದಿದ್ದ ಸೇತುವೆಯನ್ನು ಪೂರ್ಣಗೊಳಿಸಲು ಸರಕಾರಗಳು ಕೊಟ್ಟ ಮಾತನ್ನು ಪಾಲಿಸದೇ ಇದ್ದುದರಿಂದ ಬಿಹಾರದ ಪಿತೋರಗರ್ ಜಿಲ್ಲೆಯ ಗ್ರಾಮಸ್ಥರು ತಾವೇ ಆ ಕೆಲಸವನ್ನು ಪೂರ್ಣಗೊಳಿಸಿದ್ದಾರೆ. ಹಲವಾರು ವರ್ಷಗಳಿಂದ ಇಂತಹಾ ಸೇತುವೆಯನ್ನು ನಿರ್ಮಿಸಲು ಆಗ್ರಹಿಸುತ್ತಿದ್ದರೂ ಸರಕಾರ ಇದನ್ನು ನಿರ್ಮಿಸಿಕೊಡಲಿಲ್ಲ. ಅದಕ್ಕಾಗಿಯೇ ನಾವು ಸೇತುವೆಯನ್ನು ನಿರ್ಮಿಸಲು ನಿರ್ಧರಿಸಿದೆವು ಎಂದು ಗ್ರಾಮಸ್ಥರು ಹೇಳಿರುವುದಾಗಿ ಸುದ್ಧಿ ಸಂಸ್ಥೆಗಳು ವರದಿ ಮಾಡಿವೆ. 1992 ರಿಂದ ಸೇತುವೆಯ ಬೇಡಿಕೆ ಹೆಚ್ಚಾಗಿತ್ತು.

- Advertisement -

ಕಳೆದ ವರ್ಷ ಇಬ್ಬರು ಬಾಲಕಿಯರು ಸೇರಿದಂತೆ ಮೂವರು ನದಿಯಲ್ಲಿ ಮುಳುಗಿದ್ದರು. ವಿದ್ಯಾರ್ಥಿಗಳು ಮತ್ತು ರೈತರು ನದಿ ದಾಟಲು ಬಹಳ ತೊಂದರೆಗಳನ್ನು ಎದುರಿಸುತ್ತಿದ್ದರು ಎಂದು ಅವರು ಹೇಳುತ್ತಾರೆ. ಪಿತೋರಗರ್ ಜಿಲ್ಲೆಯ ಸಬಗಾರ್ಡಿ ಗ್ರಾಮದಲ್ಲಿ ನಿರಂತರ ಮಳೆಯಿಂದಾಗಿ ರಸ್ತೆಗಳು ಮತ್ತು ಕಾಳಿ ನದಿಯ ಸೇತುವೆಗಳು ಕೊಚ್ಚಿ ಹೋಗಿದ್ದವು. ಅದರ ನಂತರ ಸೇತುವೆ ನಿರ್ಮಿಸಲು ಗ್ರಾಮಸ್ಥರು ನಿರ್ಧರಿಸಿದರು. ಮರಗಳನ್ನು ಉಪಯೋಗಿಸಿ ಸೇತುವೆಗಳನ್ನು ನಿರ್ಮಿಸಲಾಗಿದೆ. ಸೇತುವೆ ನಿರ್ಮಿಸಲು ಜಿಲ್ಲಾಡಳಿತ ಲೋಕೋಪಯೋಗಿ ಇಲಾಖೆಗೆ ನಿರ್ದೇಶನ ನೀಡಿದ್ದರೂ ಪ್ರಯೋಜನವಾಗಿರಲಿಲ್ಲ.

Join Whatsapp