ಸುದರ್ಶನ್ ಟಿವಿ ಅವಮಾನಿಸಿದ್ದ ಝಕಾತ್ ಫೌಂಡೇಶನ್ ಅನ್ನು ಮುಕ್ತಕಂಠದಿಂದ ಪ್ರಶಂಸಿಸಿದ ಬಿಜೆಪಿ ನಾಯಕ!

Prasthutha|

ಹೊಸದಿಲ್ಲಿ: ಬಿಜೆಪಿ ಬೆಂಬಲಿಗ ಸುದರ್ಶನ್ ಟಿವಿಯು ತನ್ನ ಸಂದರ್ಶನವೊಂದರಲ್ಲಿ ಝಕಾತ್ ಫೌಂಡೇಶನ್ ಆಫ್ ಇಂಡಿಯಾವನ್ನು ಅವಹೇಳನ ಮಾಡಿತ್ತು. ಆದರೆ ಇದೀಗ ಬಿಜೆಪಿ ನಾಯಕ ಹಾಗೂ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಸ್ವತಃ ಝಕಾತ್ ಫೌಂಡೇಶನ್ ಅನ್ನು ಮುಕ್ತಕಂಠದಿಂದ ಪ್ರಶಂಸಿಸಿರುವುದು ಸುದರ್ಶನ್ ಟಿವಿಗೆ ಮುಖಭಂಗವಾಗಿದೆ.

ಮಹಾರಾಷ್ಟ್ರದ ನಾಗ್ಪುರದಲ್ಲಿ ವಿದರ್ಭ ಮುಸ್ಲಿಂ ಇಂಟಲೆಕ್ಚುವಲ್ ಫಾರಂ ಆಯೋಜಿಸಿದ್ದ ಸಭೆಯಲ್ಲಿ ಝಕಾತ್ ಫೌಂಡೇಶನ್ ಬಗ್ಗೆ ವಿವರವಾಗಿ ತಿಳಿಸಲಾಗಿದ್ದ ವಿಡಿಯೋ ಡಾಕ್ಯುಮೆಂಟರಿಯನ್ನು ವೀಕ್ಷಿಸಿದ ಬಳಿಕ, “ಸಾಮಾಜಿಕ ಒಳಿತಿಗಾಗಿ ಇನ್ನಷ್ಟು ಇಂತಹ ಸಂಸ್ಥೆಗಳ ಸ್ಥಾಪನೆಯಾಗಬೇಕಿದೆ. ಬಡವರ ಪಾಲಿಗೆ ವರದಾನವಾಗಿರುವ ಝಕಾತ್ ಫೌಂಡೇಶನ್ ಆಫ್ ಇಂಡಿಯಾದಂತಹಾ ಸಂಸ್ಥೆಗಳು ನಿಜಕ್ಕೂ ಮಾನವೀಯ ಕೆಲಸ ಮಾಡುತ್ತಿದೆ” ಎಂದು ಮುಕ್ತ ಕಂಠದಿಂದ ಪ್ರಶಂಸಿಸಿದರು.

- Advertisement -

ಇದೇ ಸಮಯಲ್ಲಿ ಈ ಮೊದಲು ಬಿಜೆಪಿ ಸಂಸದನಾಗಿದ್ದ ಹಾಗೂ ಸಧ್ಯ ಕಾಂಗ್ರೆಸ್ ನಾಯಕನಾಗಿರುವ ಉದಿತ್ ರಾಜ್ ಕೂಡಾ ಪ್ರಶಂಸಿಸುತ್ತಾ “ಝಕಾತ್ ಫೌಂಡೇಶನ್ ತುಂಬಾ ಉತ್ತಮ ಕೆಲಸ ಮಾಡುತ್ತಿದೆ. ಈ ಉತ್ತಮ ಕಾರ್ಯ ಝಕಾತ್ ಫೌಂಡೇಶನ್ ಸ್ವತಃ ವಿವೇಕಾನಂದ ಫೌಂಡೇಶನ್ ಅನ್ನು ಹಿಂದಿಕ್ಕಿದೆ” ಎಂದು ಹೇಳಿದ್ದಾರೆ

- Advertisement -