ಮೂರು ಗೋಣಿ ಚೀಲಗಳಲ್ಲಿ ತುರುಕಿ ಎಸೆಯಲ್ಪಟ್ಟಿದ್ದ ಹೆಣ್ಣು ಶಿಶು ಜೀವಂತವಾಗಿ ಪತ್ತೆ

Prasthutha|

ಮೀರತ್ : ಹೆಣ್ಣು ಶಿಶುವೊಂದನ್ನು ಸಾಯಿಸುವ ಉದ್ದೇಶದಿಂದ ಅದರ ಹೆತ್ತವರು ಮೂರು ಗೋಣಿ ಚೀಲಗಳಲ್ಲಿ ಉಸಿರುಗಟ್ಟುವಂತೆ ತುರುಕಿ, ಕೊರೆವ ಚಳಿಯಲ್ಲಿ ಅದನ್ನು ಬಿಟ್ಟು ಹೋಗಿದ್ದರೂ, ಮಗು ಜೀವಂತವಾಗಿ ಉಳಿದಿರುವ ಘಟನೆ ಮೀರತ್ ನಲ್ಲಿ ವರದಿಯಾಗಿದೆ.

- Advertisement -

ಮಗುವಿನ ಅಳು ಕೇಳಿ ಸ್ಥಳೀಯರು ಧಾವಿಸಿ, ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ಬಳಿಕ ಸ್ಥಳೀಯರು ಪೊಲೀಸರನ್ನು ಕರೆಸಿದ್ದು, ಅವರು ಸ್ಥಳೀಯ ಆಸ್ಪತ್ರೆಗೆ ಮಗುವನ್ನು ದಾಖಲಿಸಿದ್ದಾರೆ. ಮಗು ಆರೋಗ್ಯವಾಗಿದೆ. ಚಿಕಿತ್ಸೆ ನೀಡಲಾಗುತ್ತದೆ ಎಂದು ಪೊಲಿಸರು ತಿಳಿಸಿದ್ದಾರೆ.   

Join Whatsapp