ಬಿಜೆಪಿಗೆ ತಾಕತ್ತಿದ್ದರೆ ಮತದಾರರ ಪಟ್ಟಿಯಲ್ಲಿ 1,000 ರೋಹಿಂಗ್ಯಾರ ಹೆಸರು ಬಹಿರಂಗ ಪಡಿಸಲಿ : ಒವೈಸಿ

Prasthutha: November 24, 2020

ಹೈದರಾಬಾದ್ : ಮತದಾರರ ಪಟ್ಟಿಯಲ್ಲಿ 30,000-40,000 ರೋಹಿಂಗ್ಯಾಗಳಿದ್ದಾರೆ ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಪ್ರತಿಪಾದಿಸುತ್ತಿದೆ. ಹಾಗಾದರೆ, ಕನಿಷ್ಠ 1,000 ರೋಹಿಂಗ್ಯಾಗಳ ಹೆಸರನ್ನು ಬಿಜೆಪಿ ಪ್ರಕಟಿಸಲಿ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಸವಾಲು ಹಾಕಿದ್ದಾರೆ.

ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಶನ್ ಚುನಾವಣೆಯ ಹಿನ್ನೆಲೆಯಲ್ಲಿ, ಸೋಮವಾರ ರಾತ್ರಿ ನಡೆದ ಸಭೆಯೊಂದರಲ್ಲಿ ಮಾತನಾಡುತ್ತಾ ಅವರು ಬಿಜೆಪಿಗೆ ಈ ಸವಾಲೊಡ್ಡಿದ್ದಾರೆ.

ಮಾಹಿತಿ ಮತ್ತು ಪ್ರಸಾರ ಸಚಿವರು ಇಲ್ಲಿಗೆ ಬಂದು ಮಾತನಾಡುತ್ತಾ, ಎಐಎಂಐಎಂಗೆ ವೋಟು ಹಾಕಿದರೆ, ಟಿಆರ್ ಎಸ್ ಗೆ ಲಾಭವಾಗಲಿದೆ ಎಂದು ಹೇಳಿದ್ದಾರೆ. ಮತದಾರರ ಪಟ್ಟಿಯಲ್ಲಿ 30,000-40,000 ರೋಹಿಂಗ್ಯಾಗಳಿದ್ದಾರೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಮತದಾರರ ಪಟ್ಟಿಯಲ್ಲಿ 30,000 ರೋಹಿಂಗ್ಯಾಗಳಿದ್ದರೆ, ಗೃಹ ಸಚಿವ ಅಮಿತ್ ಶಾ ಏನು ಮಾಡುತ್ತಿದ್ದಾರೆ? ಇಷ್ಟೊಂದು ರೋಹಿಂಗ್ಯಾಗಳು ಹೇಗೆ ಸೇರ್ಪಡೆಗೊಂಡಿದ್ದಾರೆ ಎಂಬುದನ್ನು ಪತ್ತೆ ಹಚ್ಚುವುದು ಅವರ ಕೆಲಸವಲ್ಲವೇ? ಎಂದು ಒವೈಸಿ ಪ್ರಶ್ನಿಸಿದ್ದಾರೆ.

ಬಿಜೆಪಿ ಪ್ರಾಮಾಣಿಕವಾಗಿದ್ದರೆ, ನಾಳೆ (ಮಂಗಳವಾರ) ಸಂಜೆಯೊಳಗೆ 1,000 ರೋಹಿಂಗ್ಯಾರ ಹೆಸರುಗಳನ್ನು ಬಹಿರಂಗ ಪಡಿಸಲಿ. ಅವರ ಉದ್ದೇಶ ದ್ವೇಷ ಹುಟ್ಟಿಸುವುದಷ್ಟೇ ಆಗಿದೆ. ಯಾರು ಗೆಲ್ಲಬೇಕೆಂಬುದನ್ನು ನಿರ್ಧರಿಸುವುದು ಈಗ ನಿಮ್ಮ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.  

ಡಿ.1ರಂದು ಮತದಾನ ನಡೆಯಲಿದ್ದು, ಡಿ.4ರಂದು ಮತ ಎಣಿಕೆ ನಡೆಯಲಿದೆ.  

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ