‘ಲವ್ ಜಿಹಾದ್’ ಗೆ ಸಂಚು ನಡೆದಿಲ್ಲ, ವಿದೇಶಿ ದೇಣಿಗೆ ಬಂದಿಲ್ಲ : ಕಾನ್ಪುರ ಪೊಲೀಸರ ವರದಿ

Prasthutha|

ನವದೆಹಲಿ : ‘ಲವ್ ಜಿಹಾದ್’ ಬಗ್ಗೆ ಉತ್ತರ ಪ್ರದೇಶ ಸರಕಾರ ಕಾನೂನು ಮಾಡಲು ಹೊರಟಿದೆ. ಆದರೆ, ಅದೇ ಸರಕಾರದ ಪೊಲೀಸರು ‘ಲವ್ ಜಿಹಾದ್’ ಕುರಿತು ಸಿಎಂ ಯೋಗಿ ಆದಿತ್ಯನಾಥ್ ನಿಲುವಿಗೆ ತದ್ವಿರುದ್ಧವಾದ ವರದಿಯನ್ನು ನೀಡಿದ್ದಾರೆ.

ಕಾನ್ಪುರದಲ್ಲಿ ನಡೆಸಲಾದ ತನಿಖೆಯಲ್ಲಿ ಇಂತಹ ಅಂತರ್ ಧರ್ಮೀಯ 14 ವಿವಾಹಗಳು ಪತ್ತೆಯಾಗಿದ್ದು, ಅವುಗಳಲ್ಲಿ ಯಾವ ಪ್ರಕರಣದಲ್ಲೂ ಸಂಚು ರೂಪಿಸಿದ ಅಥವಾ ವಿದೇಶಿ ದೇಣಿಗೆ ಒದಗಿಸಿದ ಉದಾಹರಣೆಗಳಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

- Advertisement -

ಇದು ಬಿಜೆಪಿ ಮತ್ತು ಅದರ ಸಹಸಂಘಟನೆಗಳಾದ ಆರೆಸ್ಸೆಸ್, ವಿಎಚ್ ಪಿ, ಬಜರಂಗದಳ ಹಾಗೂ ಈ ವಿಚಾರದಲ್ಲಿ ಸುಳ್ಳಿನ ಸರಮಾಲೆಯನ್ನೇ ಹೆಣೆದು, ಅಪ್ರಪ್ರಚಾರದ ಗುಲ್ಲೆಬ್ಬಿಸುತ್ತಿರುವ ಮಾಧ್ಯಮಗಳಿಗೆ ದೊಡ್ಡ ಮುಜುಗರವನ್ನುಂಟು ಮಾಡಿದೆ.

ಮುಸ್ಲಿಂ ವ್ಯಕ್ತಿಗಳು ಹಿಂದೂ ಮಹಿಳೆಯರನ್ನು ಪ್ರೀತಿಸಿ, ವಿವಾಹವಾಗಿ ವಂಚಿಸುವ ಉದ್ದೇಶದಿಂದ ‘ಲವ್ ಜಿಹಾದ್’ ನಡೆಸುತ್ತಾರೆ ಎಂಬುದು ಬಿಜೆಪಿ ಮತ್ತು ಅದರ ಸಹ ಸಂಘಟನೆಗಳ ವಾದ. ಆದರೆ, ಕಾನ್ಪುರದಲ್ಲಿ ಕಳೆದ ಎರಡು ವರ್ಷಗಳಿಂದ ದಾಖಲಾಗಿರುವ 14 ಅಂತರ್ ಧರ್ಮೀಯ ವಿವಾಹ ಅಥವಾ ಜೊತೆಗಿರುವ ಜೋಡಿಗಳ ಪ್ರಕರಣಗಳಲ್ಲಿ ‘ಲವ್ ಜಿಹಾದ್’ ಮಾದರಿಯ ಯಾವುದೇ ಪ್ರಕರಣ ವರದಿಯಾಗಿಲ್ಲ ಎಂದು ಕಾನ್ಪುರ ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.

ಬಿಜೆಪಿ ಮತ್ತು ಅದರ ಸಹ ಸಂಘಟನೆಗಳು ಕಳೆದ ಕೆಲವು ವರ್ಷಗಳಿಂದ ‘ಲವ್ ಜಿಹಾದ್’ ಪದವನ್ನು ಸೃಷ್ಟಿಸಿ, ಮುಸ್ಲಿಂ ವಿರೋಧಿ ಭಾವನೆ ಸೃಷ್ಟಿಸುವ ಕಾರ್ಯದಲ್ಲಿ ನಿರತವಾಗಿದೆ. ಬಿಜೆಪಿ ಬೆಂಬಲಿಗ ಮಾಧ್ಯಮಗಳೂ ಇದನ್ನೇ ಸತ್ಯವೆಂಬಂತೆ ಬಿಂಬಿಸಿ, ವಿವಿಧ ಕಟ್ಟುಕಥೆಗಳನ್ನು ಹೆಣೆದು, ಬಿಜೆಪಿ ಮತ್ತು ಅದರ ಸಹ ಸಂಘಟನೆಗಳ ಓಲೈಕೆಯಲ್ಲಿ ನಿರತವಾಗಿವೆ.

- Advertisement -