ನಟ ʻವಿಶಾಲ್ʼ ಮನೆ ಮೇಲೆ ಅಪರಿಚಿತರಿಂದ ಕಲ್ಲು ತೂರಾಟ

ಚೆನ್ನೈ: ತಮಿಳು ನಟ ವಿಶಾಲ್ ಮನೆಯ ಮೇಲೆ ಅಪರಿಚಿತರು ಕಲ್ಲು ತೂರಾಟ ನಡೆಸಿರುವ ಘಟನೆ ಚೆನ್ನೈನ ಅಣ್ಣಾನಗರಲ್ಲಿ ನಡೆದಿದೆ.

ವಿಶಾಲ್ ಮನೆ ಬಳಿ ಕಾರಿನಲ್ಲಿ ಬಂದ ಕೆಲ ಅಪರಿಚಿತ ವ್ಯಕ್ತಿಗಳು ಮನೆಗೆ ಕಲ್ಲು ಎಸೆದಿದ್ದು, ಮನೆಯ ಕಿಟಕಿ ಗಾಜುಗಳು ಒಡೆದಿವೆ. ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ.

- Advertisement -

ಘಟನೆ ಬಳಿಕ ವಿಶಾಲ್ ಪರವಾಗಿ ಅವರ ಮ್ಯಾನೇಜರ್ ಹರಿ ಕೃಷ್ಣನ್ ಅಣ್ಣಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಘಟನೆ ನಡೆದ ಸಂದರ್ಭದಲ್ಲಿ ವಿಶಾಲ್ ಅವರು ಹೊರಗೆ ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದರು ಎನ್ನಲಾಗಿದೆ.

- Advertisement -