ಸುಳ್ಯ: ಅಪ್ರಾಪ್ತ ಬಾಲಕಿಯ ಅತ್ಯಾಚಾರ; ಪ್ರಕರಣ ದಾಖಲು

ಸುಳ್ಯ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಯುವಕನೋರ್ವನ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾದ ಘಟನೆ ಸುಳ್ಯದಲ್ಲಿ ನಡೆದಿದೆ.


ಆರೋಪಿಯನ್ನು ಸುಳ್ಯ ತಾಲೂಕಿನ ಉಬರಡ್ಕ ನಿವಾಸಿ ತೀರ್ಥಪ್ರಸಾದ್ ಎಂದು ಗುರುತಿಸಲಾಗಿದೆ. ಈತ ಅಪ್ರಾಪ್ತ ಬಾಲಕಿಯೊಂದಿಗೆ ಸಲುಗೆ ಬೆಳೆಸಿ ದೈಹಿಕ ಸಂಪರ್ಕ ನಡೆಸಿದ್ದಾನೆ ಎನ್ನಲಾಗಿದ್ದು, ಬಾಲಕಿಯ ಪೋಷಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

- Advertisement -


ವಾಟ್ಸಪ್ ಗ್ರೂಪ್ ಒಂದರಲ್ಲಿ ಆರೋಪಿ ತೀರ್ಥಪ್ರಸಾದ್ ಹಾಗೂ ಅಪ್ರಾಪ್ತ ಬಾಲಕಿ ಪರಸ್ಪರ ಪರಿಚಯವಾಗಿದ್ದು, ಬಾಲಕಿಯೊಂದಿಗೆ ಸಲುಗೆ ಬೆಳೆಸಿದ ಆರೋಪಿ ಆಕೆಯನ್ನು ಸುಳ್ಯಕ್ಕೆ ಕರೆಸಿಕೊಂಡಿದ್ದಾನೆ. ಸುಳ್ಯಕ್ಕೆ ಬಂದ ಬಾಲಕಿಯನ್ನು ಕರೆದುಕೊಂಡು ಸ್ನೇಹಿತನ ರೂಮ್ ಗೆ ತೆರಳಿ ಅಲ್ಲಿ ಆಕೆಯ ಜೊತೆ ದೈಹಿಕ ಸಂಪರ್ಕದಲ್ಲೇರ್ಪಟ್ಟಿದ್ದಾನೆ ಎನ್ನಲಾಗಿದೆ.


ಈ ವಿಚಾರವನ್ನು ಯಾರಲ್ಲಿಯೂ ಹೇಳದೆ ಮುಚ್ಚಿಟ್ಟಿದ್ದ ಬಾಲಕಿಗೆ ಕಳೆದ ತಿಂಗಳಿನನಿಂದ ವಿಪರೀತ ಹೊಟ್ಟೆನೋವು ಪ್ರಾರಂಭವಾಗಿದ್ದು, ಪೋಷಕರು ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಿದಾಗ ಗರ್ಭಿಣಿ ಎನ್ನುವುದು ದೃಢಪಟ್ಟಿದೆ.

- Advertisement -