ಅನ್ಯಾಯದ ತೀರ್ಪು ಅಂತಿಮ ತೀರ್ಪು ಆಗದು: ಇಮಾಮ್ಸ್ ಕೌನ್ಸಿಲ್

Prasthutha|

ಮಂಗಳೂರು: ರಾಜ್ಯ ಸರಕಾರದ ಹಿಜಾಬ್ ನಿಷೇಧದ ಆದೇಶವನ್ನು ಎತ್ತಿ ಹಿಡಿದಿರುವ ಕರ್ನಾಟಕ ಹೈಕೋರ್ಟ್ ತೀರ್ಪು ಅನ್ಯಾಯದ ತೀರ್ಪು ಎಂದು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ರಾಷ್ಟ್ರೀಯ ಸಮಿತಿ ಸದಸ್ಯ ಜಾಫರ್ ಸಾದಿಕ್ ಫೈಝಿ ಹೇಳಿದ್ದಾರೆ. ಹೈಕೋರ್ಟ್ ಇಸ್ಲಾಮಿಕ್ ವಿಧಿ ವಿಧಾನವನ್ನು ತಪ್ಪಾಗಿ ವ್ಯಾಖ್ಯಾನಿಸಿದೆ, ತೀರ್ಪು ಧರ್ಮಾಧಾರಿತ, ತಾರತಮ್ಯದ ತೀರ್ಪಾಗಿದೆ, ಈ ಅನ್ಯಾಯದ ತೀರ್ಪು ಎಂದಿಗೂ ಅಂತಿಮ ತೀರ್ಪಾಗಲು ಸಾಧ್ಯವಿಲ್ಲ ಎಂದು ಫೈಝಿ ಹೇಳಿದ್ದಾರೆ.

- Advertisement -

ಇಂದು ನಗರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಈ ವಿವಾದ  ಮುಸ್ಲಿಮ್ ವಿದ್ಯಾರ್ಥಿನಿಯರನ್ನು ಶಿಕ್ಷಣದಿಂದ ದೂರವಿಡಲು ನಡೆಸಿದ ಷಡ್ಯಂತ್ರದ ಭಾಗವಾಗಿದೆ. ಕುರಾನ್ ನಲ್ಲಿ ಶಿರೋವಸ್ತ್ರ ಕುರಿತ ಸ್ಪಷ್ಟವಾದ ಉಲ್ಲೇಖವಿದೆ, ಪ್ರವಾದಿ ವಚನದಲ್ಲೂ ಶಿರವಸ್ತ್ರದ ಬಗ್ಗೆ ಸ್ಪಷ್ಟತೆಯಿದೆ. ಆದರೂ ಹೈಕೋರ್ಟ್, ಹಿಜಾಬ್ ಇಸ್ಲಾಮಿನ ಅವಶ್ಯಕ ಭಾಗವಲ್ಲ ಎಂದಿರುವುದು ವಿಪರ್ಯಾಸ ಎಂದು ಹೇಳಿದ್ದಾರೆ. ಅಲ್ಲದೇ ನಾಳೆ ಕರೆನೀಡಲಾಗಿರುವ ಸ್ವಯಂಪ್ರೇರಿತ ಕರ್ನಾಟಕ ಬಂದ್ ಗೆ ಇಮಾಮ್ಸ್ ಕೌನ್ಸಿಲ್ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಇದೇ ಸಂದರ್ಭ ಹೇಳಿದ್ದಾರೆ.

 ಧಾರ್ಮಿಕ ಸ್ವಾತಂತ್ರ್ಯದ ಜೊತೆಗೆ ಶಿಕ್ಷಣ ಪಡೆಯುವ ಹಕ್ಕು ವಿದ್ಯಾರ್ಥಿನಿಯರಿಗಿದೆ . ನ್ಯಾಯಾಲಯ ವಿದ್ಯಾರ್ಥಿನಿಯರಿಗೆ ನ್ಯಾಯ ನೀಡದಿರುವುದು ಖೇದಕರವಾಗಿದೆ. ಈ ಕುರಿತು ಕರ್ನಾಟಕ ಹೈಕೋರ್ಟ್ ತನ್ನ ತೀರ್ಪನ್ನು ಮರುಪರಿಶೀಲಿಸಬೇಕು ಎಂದು ಜಾಫರ್ ಫೈಝಿ ಒತ್ತಾಯಿಸಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಮಿತಿ ಸದಸ್ಯರಾದ ಅಬ್ದುಲ್ ಹಮೀದ್ ಮುಸ್ಲಿಯಾರ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ  ಮೊಹಮ್ಮದ್ ಹಾರಿಸ್ ಹನೀಫಿ ಉಪಸ್ಥಿತರಿದ್ದರು.

Join Whatsapp