ಹೈಕೋರ್ಟ್ ತೀರ್ಪನ್ನು ಪ್ರಶ್ನಿಸುವುದು ಅಪರಾಧವಲ್ಲ: ವುಮೆನ್ ಇಂಡಿಯಾ ಮೂಮೆಂಟ್

Prasthutha|

► ನಾಳಿನ ಸ್ವಯಂ ಪ್ರೇರಿತ ಕರ್ನಾಟಕ ಬಂದ್ ಗೆ ವಿಮ್ ಬೆಂಬಲ

- Advertisement -

ಮಂಗಳೂರು: ಹಿಜಾಬ್ ಕುರಿತ ಹೈಕೋರ್ಟ್ ತೀರ್ಪಿನ ಬಗ್ಗೆ ವುಮೆನ್ ಇಂಡಿಯಾ ಮೂಮೆಂಟ್ WIM ರಾಜ್ಯಾಧ್ಯಕ್ಷೆ ಶಾಹಿದಾ ತಸ್ನೀಮ್ ಅಸಮಾಧಾನ ವ್ಯಕ್ತಪಡಿಸಿದ್ದು, ಇದೊಂದು ಅಸಾಂವಿಧಾನಿಕ ತೀರ್ಪು ಎಂದು ಹೇಳಿದ್ದಾರೆ. ಇಂದು ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈಕೋರ್ಟ್ ತೀರ್ಪಿನ ಬಗ್ಗೆ ಪ್ರಶ್ನಿಸುವುದು ಅಪರಾಧವಲ್ಲ, ಆದರೆ ಕೆಲವು ಮಾಧ್ಯಮಗಳು ಇದನ್ನು ಅಪರಾಧೀಕರಿಸುತ್ತಿವೆ. ಹೈಕೋರ್ಟ್ ಹಿಜಾಬ್ ಬಗೆಗಿನ ಅಂತಿಮ ತೀರ್ಮಾನ ಸರಕಾರಕ್ಕೆ ಬಿಟ್ಟಿದೆ, ಸರಕಾರ ಧನಾತ್ಮಕವಾಗಿ ಸ್ಪಂದಿಸಬೇಕಿದೆ ಎಂದಿದ್ದಾರೆ.

ವಿದ್ಯಾರ್ಥಿನಿಯರು ಹಿಜಾಬ್ ಹಕ್ಕಿಗಾಗಿ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಕೋರ್ಟ್ ಧಾರ್ಮಿಕತೆ ಬಗ್ಗೆ ತೀರ್ಪು ನೀಡಿದ್ದು ,ಇದೊಂದು ಅಸಾಂವಿಧಾನಿಕ ತೀರ್ಪು ಎಂದು ತಸ್ನೀಂ ಬಣ್ಣಿಸಿದ್ದಾರೆ.  ಹಿಜಾಬ್ ಎನ್ನುವುದು ವಿದ್ಯಾರ್ಥಿನಿಯರು ಮೇಲೆ ಹೇರಲಾಗಿಲ್ಲ.ಬದಲಿಗೆ ವಿದ್ಯಾರ್ಥಿನಿಯರೇ ತಮ್ಮ ಹಕ್ಕುಗಳನ್ನು ಕೇಳುತ್ತಿದ್ದಾರೆ ಎಂದು ಅವರು ಸ್ಪಷ್ಟನೆ ನೀಡಿದರು. ಅಲ್ಲದೇ ನಾಳಿನ ಸ್ವಯಂಪ್ರೇರಿತ ಕರ್ನಾಟಕ ಬಂದ್ ಗೆ ವಿಮ್ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಹೇಳಿದ್ದಾರೆ.

- Advertisement -

ಹೈಕೋರ್ಟ್ ನೀಡಿರುವ ತೀರ್ಪು ರಾಜಕೀಯ ಪ್ರೇರಿತವಾಗಿದೆ, ಈ ಹಿಂದೆ ಇದ್ದ ಯಥಾಸ್ಥಿತಿಯನ್ನೇ ಸರಕಾರ ಕಾಪಾಡಲಿ, ಹೆಣ್ಣು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಹಿಜಾಬ್ ಧರಿಸಲು ಅವಕಾಶ ನೀಡಲಿ ಎಂದಿದ್ದಾರೆ.  ಭೇಟಿ ಬಚಾವೋ, ಭೇಟಿ ಪಡಾವೋ ಘೋಷಣೆಗೆ ವಿರುದ್ಧವಾಗಿ ಸರಕಾರ ನಡೆಯುತ್ತಿದೆ. ಸುಪ್ರೀಂ ಕೋರ್ಟ್ ಹೋಗುವ ವಿದ್ಯಾರ್ಥಿನಿಯರಿಗೆ WIM ನೈತಿಕವಾಗಿ ಬೆಂಬಲ ನೀಡಲಿದೆ ಎಂದು ಶಾಹಿದಾ ತಸ್ನೀಂ ತಿಳಿಸಿದರು.

Join Whatsapp