ನಾಳಿನ ಸ್ವಯಂಪ್ರೇರಿತ ಬಂದ್ ಗೆ ವಿಟ್ಲ ಮುಸ್ಲಿಂ ಒಕ್ಕೂಟ ಬೆಂಬಲ

Prasthutha|

ವಿಟ್ಲ:  ಹಿಜಾಬ್ ತೀರ್ಪಿನ ವಿರುದ್ಧ ನಾಳಿನ ಸ್ವಯಂಪ್ರೇರಿತ ಕರ್ನಾಟಕ ಬಂದ್ ಗೆ ವಿಟ್ಲ ಮುಸ್ಲಿಂ ಒಕ್ಕೂಟ ಬೆಂಬಲ ಸೂಚಿಸಿದೆ.

- Advertisement -

ಇಸ್ಲಾಮಿನಲ್ಲಿ ಮುಸ್ಲಿಮ್ ಮಹಿಳೆಯರಿಗೆ ಹಿಜಾಬ್ ಮಹತ್ವವಲ್ಲ ,ಮತ್ತು ಹಿಜಾಬ್ ಇಸ್ಲಾಮಿನಲ್ಲಿ ಅವಿಭಾಜ್ಯ ಅಂಗ ವಲ್ಲ ಎಂದು ರಾಜ್ಯ  ಹೈಕೋರ್ಟ್ ನ  ತೀರ್ಪುನ್ನು ಮುಸ್ಲಿಮರು ಸಹಿಸಲು ಸಾಧ್ಯವಿಲ್ಲ. ನಾಳಿನ ಸ್ವಯಂಪ್ರೇರಿತ ಬಂದ್ ಗೆ ಮುಸ್ಲಿಂ ಒಕ್ಕೂಟ ವಿಟ್ಲ ಸಂಪೂರ್ಣ ಸಹಕಾರ ನೀಡುತ್ತದೆ. ಆದ್ದರಿಂದ ಎಲ್ಲಾ ವ್ಯಾಪಾರಿಗಳು, ಉದ್ದಿಮೆದಾರರು ತಮ್ಮ  ಒಂದು ದಿನದ ವ್ಯವಹಾರವನ್ನು ಸ್ಥಗಿತಗೊಳಿಸಬೇಕು ಎಂದು ಮುಸ್ಲಿಂ ಒಕ್ಕೂಟ ವಿಟ್ಲ ಇದರ ಅಧ್ಯಕ್ಷರಾದ ಎಂ ಎಸ್ ಮಹಮ್ಮದ್ ತಿಳಿಸಿದ್ದಾರೆ.

Join Whatsapp