ಶಿಕ್ಷಣ ಪಡೆಯದ ರಾಜಕಾರಣಿಗಳು ನಮ್ಮನ್ನು ಆಳುತ್ತಿದ್ದಾರೆ: ನಟಿ ಕಾಜೋಲ್​

Prasthutha|

ಹೊಸದಿಲ್ಲಿ: ಶಿಕ್ಷಣ ಪಡೆಯದ ರಾಜಕಾರಣಿಗಳು ನಮ್ಮನ್ನು ಆಳುತ್ತಿದ್ದಾರೆ ಎಂದು ಖ್ಯಾತ ಬಾಲಿವುಡ್ ನಟಿ ಕಾಜೋಲ್​ ಹೇಳಿಕೆ ನೀಡಿದ್ದಾರೆ.

- Advertisement -

ತಾನು ನಟಿಸಿರುವ ‘ದಿ ಟ್ರಯಲ್​’ ವೆಬ್​ ಸಿರೀಸ್​ ಬಿಡುಗಡೆ ಪ್ರಯುಕ್ತ ಮಾಧ್ಯಮಗಳಿಗೆ ಸಂದರ್ಶನ ನೀಡುವ ವೇಳೆ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಬದಲಾವಣೆ ಎಂಬುದು ತುಂಬಾ ನಿಧಾನಗತಿಯಲ್ಲಿ ಇದೆ. ಯಾಕೆಂದರೆ ನಾವು ನಮ್ಮ ಸಂಪ್ರದಾಯದಲ್ಲಿ ಮುಳುಗಿದ್ದೇವೆ. ಬದಲಾವಣೆ ಬರಬೇಕಿರುವುದು ಶಿಕ್ಷಣದಿಂದ. ಸರಿಯಾದ ಶಿಕ್ಷಣ ಪಡೆಯದೇ ಇರುವ ರಾಜಕಾರಣಿಗಳು ನಮ್ಮಲ್ಲಿ ಇದ್ದಾರೆ. ಸೂಕ್ತ ದೃಷ್ಟಿಕೋನ ಇಲ್ಲದವರು ನಮ್ಮನ್ನು ಆಳುತ್ತಿದ್ದಾರೆ ಎಂದು ಹೇಳಿದ್ದಾರೆ.


ಕಾಜೋಲ್​ ಅವರ ಈ ಹೇಳಿಕೆಗೆ ಕೆಲವು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಸ್ವತಃ ಕಾಜೋಲ್​ ಅವರೇ ಶಾಲೆಯನ್ನು ಅರ್ಧಕ್ಕೆ ಬಿಟ್ಟವರು. ಅವರ ಗಂಡ ಕ್ಯಾನ್ಸರ್​ ಮಾರುತ್ತಾರೆ. ಈಗ ಆಕೆಯ ಅತಿಯಾದ ಆತ್ಮವಿಶ್ವಾಸ ಹೇಗಿದೆ ನೋಡಿ’ ಎಂದು ಟ್ರೋಲ್​ ಮಾಡಲಾಗಿದೆ. ಇನ್ನೂ ಕೆಲವರು ಕಾಜೋಲ್​ ಅವರ ಬೆಂಬಲಕ್ಕೆ ನಿಂತಿದ್ದಾರೆ. ‘ಕಾಜೋಲ್​ ಅವರು ಸುಳ್ಳು ಡಿಗ್ರಿ ಸರ್ಟಿಫಿಕೇಟ್​ ಹೊಂದಿಲ್ಲ. ಜನರಿಗೆ ಸುಳ್ಳು ಭರವಸೆ ನೀಡಿಲ್ಲ’ ಎಂದು ಅಭಿಮಾನಿಗಳು ಸಪೋರ್ಟ್​ ಮಾಡಿದ್ದಾರೆ.