ಇತಿಹಾಸದಲ್ಲೇ ಮೊದಲು: ದರ್ಶನ್‌ ಇರುವ ಪೊಲೀಸ್‌ ಠಾಣೆಗೆ ಶಾಮಿಯಾನ, ಠಾಣೆ ಸುತ್ತಾ 144 ಸೆಕ್ಷನ್

Prasthutha|

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕಣದಲ್ಲಿ ನಟ ದರ್ಶನ್ 2ನೇ ದಿನವನ್ನು ಸೆಲ್ ನಲ್ಲಿ ಕಳೆದಿದ್ದಾರೆ.

- Advertisement -

ಈ ನಡುವೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳನ್ನು ಮರೆ ಮಾಚಲು ಪೊಲೀಸರು ಶಾಮಿಯಾನ ಅಳಡಿಸಿದ್ದಾರೆ.

ಮಾಧ್ಯಮಗಳಿಗೆ ದರ್ಶನ್ ಸೇರಿ ಇತರೇ ಆರೋಪಿಗಳು ಕಾಣಿಸದಂತೆ ಪೊಲೀಸ್ ಠಾಣೆಯ ಸುತ್ತಲು ಶಾಮಿಯಾನ ಅಳಡಿಸಿದ್ದಾರೆ. ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ ಕಾಂಪೌಂಡ್ ಸುತ್ತಲು ಪೊಲೀಸರು ಪರದೆ ಕಟ್ಟಿಸಿದ್ದಾರೆ. ಹೊರಗಡೆಯಿಂದ ಯಾವುದೇ ಸಣ್ಣ ದೃಶ್ಯಾವಳಿಯೂ ಸಿಗದಂತೆ ಪೊಲೀಸರು ಶಾಮಿಯಾನ ಹಾಗೂ ಪರದೆ ಹಾಕಿಸಿದ್ದಾರೆ.

- Advertisement -

ಇದೇ ವೇಳೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಬಳಿ 144 ಸೆಕ್ಷನ್ ಜಾರಿ ಮಾಡಿ ಪೊಲೀಸ್ ಕಮೀಷನರ್ ಬಿ. ದಯಾನಂದ ಅವರು ಆದೇಶ ಹೊರಡಿಸಿದ್ದಾರೆ. ಠಾಣೆ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದು, ಶಾಂತಿ ಸುವ್ಯವಸ್ಥೆ ಕಾಪಾಡಲು ಮುನ್ನೆಚ್ಚರಿಕೆ ಕ್ರಮವಾಗಿ ಜೂನ್ 13 ರಿಂದ ಜೂನ್ 17 ವರೆಗೆ ಜಾರಿ ವರೆಗೂ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ.

Join Whatsapp