ವರದಿ ಒಪ್ಪಲು ಸಾಧ್ಯವೇ ಇಲ್ಲ: ಜಾತಿಗಣತಿ ವಿರುದ್ಧ ಶಾಮನೂರು ಶಿವಶಂಕರಪ್ಪ ಗುಡುಗು

Prasthutha|

ದಾವಣಗೆರೆ: ಯಾರು ಏನೇ ಹೇಳಲಿ, ಜಾತಿ ಗಣತಿ ವರದಿ ಒಪ್ಪಲು ಸಾಧ್ಯವೇ ಇಲ್ಲ ಎಂದು ಹಿರಿಯ ಕಾಂಗ್ರೆಸಿಗ, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಮತ್ತೊಮ್ಮೆ ಗುಡುಗಿದ್ದಾರೆ.

- Advertisement -

ಮುಖ್ಯಮಂತ್ರಿ ಸಿದ್ದರಾಮಯ್ಯ ವರದಿ ಸ್ವೀಕರಿಸುತ್ತಿದ್ದಂತೆ ಶಾಮನೂರು ಮೊದಲ ಪ್ರತಿಕ್ರಿಯೆ ನೀಡಿದ್ದು, ವರದಿ ತಯಾರಿಕೆಗೆ ವೈಜ್ಞಾನಿಕ ಮಾನದಂಡಗಳನ್ನು ಅನುಸರಿಸಿಲ್ಲ ಎಂದಿದ್ದಾರೆ.

ಮನೆ-ಮನೆಗೆ ಭೇಟಿ ನೀಡಿಲ್ಲ, ಸರ್ಕಾರದ ಕೈ ಸೇರುವ ಮುನ್ನವೇ ಸೋರಿಕೆಯಾಗಿದೆ ಎಂದೂ ಶಿವಶಂಕರಪ್ಪ ಕಿಡಿಗಾರಿದ್ದಾರೆ.

- Advertisement -

1990ರ ಚಿನ್ನಪ್ಪ ರೆಡ್ಡಿ ಆಯೋಗದ ವರದಿ ಪ್ರಕಾರ ಒಟ್ಟು ಜನಸಂಖ್ಯೆಯಲ್ಲಿ ಶೇ. 17 ರಷ್ಟಿದ್ದ ವೀರಶೈವ ಲಿಂಗಾಯತರ ಪ್ರಮಾಣ 33 ವರ್ಷಗಳ ಬಳಿಕ ಏರಿಕೆ ಕಾಣುವ ಬದಲು ಶೇ. 10.68 ಕ್ಕೆ ಕುಸಿದಿದ್ದು ಹೇಗೆ ಎಂದು ಪ್ರಶ್ನಿಸಿದ ಅವರು, ರಾಜ್ಯದಲ್ಲಿ ಸಮುದಾಯದ ಜನಸಂಖ್ಯೆ 2 ಕೋಟಿಗೂ ಅಧಿಕವಿದೆ ಎಂದು ಪುನರುಚ್ಛರಿಸಿದ್ದಾರೆ.

Join Whatsapp