ಅತ್ಯಾಚಾರಿ ಗುರ್ಮೀತ್ ರಾಮ್‌ ರಹೀಂಗೆ ಇನ್ನು ಪರೋಲ್‌ ಇಲ್ಲ: ಹೈಕೋರ್ಟ್‌

Prasthutha|

ಅಮೃತಸರ: ಅತ್ಯಾಚಾರ ಪ್ರಕರಣದಲ್ಲಿ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್‌ ರಾಮ್‌ ರಹೀಂಗೆ ಪದೇ ಪದೆ ಪರೋಲ್‌ ನೀಡುತ್ತಿರುವ ಬಗ್ಗೆ ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ ಆಕ್ರೋಶ ವ್ಯಕ್ತಪಡಿಸಿದ್ದು,ಇನ್ನು ಮುಂದೆ ಆತನಿಗೆ ಪರೋಲ್‌ ನೀಡುವಂತಿಲ್ಲ ಎಂದು ಆದೇಶಿಸಿದೆ.

- Advertisement -

ಜನವರಿಯಲ್ಲಷ್ಟೇ ಅತ್ಯಾಚಾರಿ ಗುರ್ಮೀತ್ ರಾಮ್‌ಗೆ 50 ದಿನಗಳ ಪರೋಲ್‌ ನೀಡಲಾಗಿದೆ. ಇದು 10 ತಿಂಗಳ ಅವಧಿಯಲ್ಲಿ ಆತ ಪಡೆದಿರುವ 7ನೇ ಪರೋಲ್‌. ಕಳೆದ 4 ವರ್ಷಗಳಲ್ಲಿ ಸಿಕ್ಕ 9ನೇ ಪರೋಲ್‌ ಆಗಿದೆ.

ಮಾ.10ರೊಳಗೆ ಆತ ಶರಣಾಗಬೇಕು. ಇನ್ನು ಆತನಿಗೆ ಪರೋಲ್‌ ನೀಡುವ ಮುನ್ನ ಕೋರ್ಟ್‌ನ ಅನುಮತಿ ಪಡೆಯಬೇಕು ಎಂದು ಹರ್ಯಾಣ ಸರ್ಕಾರಕ್ಕೆ ಹೈಕೋರ್ಟ್‌ ಸೂಚಿಸಿದೆ.

Join Whatsapp