8 ದಿನಗಳ ಬಳಿಕ ರೈತ ಶುಭಕರಣ್ ಅಂತ್ಯ ಸಂಸ್ಕಾರ

Prasthutha|

ಚಂಡೀಗಢ: ರೈತರಿಂದ ನಡೆಯುವ ದೆಹಲಿ ಚಲೋ ಭಾಗವಾಗಿ ರೈತರು ಹರಿಯಾಣದಲ್ಲಿ ನಡೆಸಿದ ಮುಷ್ಕರ ಸಂದರ್ಭ ಪೊಲೀಸರೊಂದಿಗಿನ ಘರ್ಷಣೆಯಲ್ಲಿ ಮೃತಪಟ್ಟ ಯುವರೈತ ಶುಭಕರಣ್ ಸಿಂಗ್ ಅಂತ್ಯಸಂಸ್ಕಾರ ಎಂಟು ದಿನಗಳ ಬಳಿಕ ಬಟಿಂಡಾದಲ್ಲಿ ನಡೆಸಲಾಗಿದೆ.

- Advertisement -

ಹರಿಯಾಣ ಗಡಿಯಲ್ಲಿ ರೈತರನ್ನು ತಡೆಯಲಾಗಿತ್ತು. ಪಂಜಾಬ್ ಹಾಗೂ ಹರಿಯಾಣ ಗಡಿಭಾಗದಲ್ಲಿ ನಡೆದ ಪೊಲೀಸ್ ಹಾಗೂ ರೈತರ ನಡುವಿನ ಘರ್ಷಣೆಯಲ್ಲಿ ಫೆ. 21ರಂದು ಯುವ ರೈತ‌ ಶುಭಕರಣ್ ಸಾವೀಗೀಡಾಗಿದ್ದರು. ಸಾವಿಗೆ ಕಾರಣರಾದವರ ವಿರುದ್ಧ ಪ್ರಕರಣ ದಾಖಲಿಸುವಂತೆ ಮುಷ್ಕರ ನಿರತ ರೈತರು ಪಟ್ಟು ಹಿಡಿದಿದ್ದರು.

ಶುಭಕರಣ್ ಮೃತದೇಹವನ್ನು ಪಟಿಯಾಲದಲ್ಲಿರುವ ರಾಜೀಂದ್ರ ವೈದ್ಯಕೀಯ ಆಸ್ಪತ್ರೆಯಲ್ಲಿ ಇಡಲಾಗಿತ್ತು.

Join Whatsapp