September 18, 2020
ಉಮ್ರಾ ಯಾತ್ರೆ ಶೀಘ್ರ ಪುನರಾರಂಭಕ್ಕೆ ಸೌದಿಯ ತಯಾರಿ ಹೇಗಿದೆ ಗೊತ್ತಾ?

ಕೊರೋನಾ ಮಹಾಮಾರಿಯ ಅಟ್ಟಹಾಸಕ್ಕೊಳಗಾಗಿ ಸೌದಿಯ ಪ್ರವಾಸೋದ್ಯಮದ ಪ್ರಮುಖ ಆದಾಯ ಮೂಲವಾಗಿದ್ದ ಉಮ್ರಾ ಯಾತ್ರೆಯನ್ನು ಪುನಾರಂಭಿಸಲು ವಿವಿಧ ಸಚಿವಾಲಯಗಳು ಮತ್ತು ಎರಡು ಹರಮ್ ಮೇಲ್ವಿಚಾರಣಾ ಪ್ರಾಧಿಕಾರಗಳನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿದೆ. ಉಮ್ರಾಗೆ ಅರ್ಜಿ ಸಲ್ಲಿಸಲು ವಿಶೇಷ ಆ್ಯಪ್ ನ್ನು ಬಿಡುಗಡೆ ಮಾಡಲಾಗುವುದು. ಸೌದಿ ಅರೇಬಿಯಾದ ಯಾತ್ರಾರ್ಥಿಗಳಿಗೆ ಮೊದಲು ಪ್ರವೇಶಿಸಲು ಅವಕಾಶವಿರುತ್ತದೆ. ಮಕ್ಕಾದಲ್ಲಿ ಇದೀಗಾಗಲೇ ಉಮ್ರಾ ಸೇವಾ ಸಂಸ್ಥೆಗಳು ಮತ್ತೆ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.
ಕೊರೋನಾ ಆರಂಭಗೊಂಡಾಗಿನಿಂದ ಸೌದಿ ಸರಕಾರ ಉಮ್ರಾ ಹಾಗೂ ಈ ವರ್ಷದ ಹಜ್ ಯಾತ್ರೆಯ ಮೇಲೆ ನಿರ್ಬಂಧ ವಿಧಿಸಿತ್ತು. ಇದರಿಂದಾಗಿ ಸರಕಾರ ಮಾತ್ರವಲ್ಲ ಅಲ್ಲಿನ ಪ್ರವಾಸೋದ್ಯಮ ಆದಾಯದ ಮೇಲೆ ಅದನ್ನೇ ಅವಲಂಬಿತವಾಗಿದ್ದ ಹಲವು ಟ್ರಾವೆಲ್ ಸಂಸ್ಥೆಗಳು ನಷ್ಟದ ಹಾದಿ ಹಿಡಿದಿದ್ದವು. ಇದೀಗ ಸರಕಾರದ ಈ ನಿರ್ಧಾರದಿಂದ ಎಲ್ಲರೂ ನಿರಾಳರಾಗಿದ್ದಾರೆ