ಎನ್‌ಎಸ್‌ಎ, ಯುಎಪಿಎ ಕರಾಳ ಕಾನೂನಿನ ಬಳಕೆ | ಅಗ್ರಸ್ಥಾನದಲ್ಲಿ ಬಿಜೆಪಿ ಆಡಳಿತ ಸರಕಾರಗಳು

Prasthutha|

1,198 ಬಂಧಿತರ ಪೈಕಿ 1,033 ಮಂದಿ ಮಧ್ಯ ಪ್ರದೇಶ, ಉತ್ತರ ಪ್ರದೇಶದವರು

- Advertisement -

 ಹೊಸದಿಲ್ಲಿ: ಭಾರತೀಯ ಜನತಾ ಪಕ್ಷ (ಬಿಜೆಪಿ) ನಿಯಂತ್ರಿತ ರಾಜ್ಯಗಳು ಕಳೆದ ನಾಲ್ಕು ವರ್ಷಗಳಲ್ಲಿ ಕಠಿಣ ಕಾನೂನುಗಳಾದ ರಾಷ್ಟ್ರೀಯ ಭದ್ರತಾ ಕಾಯ್ದೆ(ಎನ್‌ಎಸ್‌ಎ) ಮತ್ತು ಕಾನೂನುಬಾಹಿರ ಚಟುವಟಿಕೆಗಳು(ತಡೆಗಟ್ಟುವಿಕೆ) ಕಾಯ್ದೆ(ಯುಎಪಿಎ)ಯನ್ನು ಅತಿ ಹೆಚ್ಚಾಗಿ ಬಳಸಿಕೊಂಡಿದೆ ಎಂದು ಸರಕಾರ ಬಿಡುಗಡೆ ವರದಿಯಿಂದ ಬಹಿರಂಗಗೊಂಡಿದೆ.

 ದೇಶದಲ್ಲಿ ಎನ್‌ಎಸ್‌ಎ ಅಡಿಯಲ್ಲಿ 2017-18ರಲ್ಲಿ 1,198 ಜನರನ್ನು ಬಂಧಿಸಲಾಗಿದ್ದು, ಈ ಪೈಕಿ 1,033(ಶೇ.86ರಷ್ಟು) ಜನರು ಬಿಜೆಪಿ ಆಳ್ವಿಕೆ ಹೊಂದಿರುವ ಎರಡು ರಾಜ್ಯಗಳಾದ ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದವರಾಗಿದ್ದಾರೆ ಎಂದು ಸಂಸತ್ತಿನಲ್ಲಿ ಗೃಹ ಸಚಿವಾಲಯ ನೀಡಿದ ವಿವರಗಳು ತೋರಿಸುತ್ತವೆ.

- Advertisement -

ಮಧ್ಯಪ್ರದೇಶ ಸರಕಾರವು 2017ರಲ್ಲಿ 300 ಜನರನ್ನು ಮತ್ತು 2018ರಲ್ಲಿ 495 ಜನರನ್ನು ಬಂಧಿಸಿದೆ. 2017ರಲ್ಲಿ 171 ಜನರನ್ನು 2018ರಲ್ಲಿ 167 ಜನರನ್ನು ಬಂಧಿಸಿರುವ ಉತ್ತರ ಪ್ರದೇಶ ಸರಕಾರವು ಎರಡನೇ ಸ್ಥಾನದಲ್ಲಿದೆ.

ಎನ್‌ಎಸ್‌ಎ ಅಡಿಯಲ್ಲಿ 2017ರಲ್ಲಿ 23 ಮತ್ತು 2018ರಲ್ಲಿ 17 ಜನರನ್ನು ಬಂಧಿಸಿರುವ ನಾಗಾಲ್ಯಾಂಡ್ ಮೂರನೇ ಸ್ಥಾನದಲ್ಲಿದೆ. ಮಣಿಪುರದಲ್ಲಿ 2017ರಲ್ಲಿ 6 ಜನರನ್ನು ಮತ್ತು ಛತ್ತೀಸ್‌ಗಢದಲ್ಲಿ 2017ರಲ್ಲಿ ಒಬ್ಬರನ್ನು ಹಾಗೂ 2018ರಲ್ಲಿ ಒಬ್ಬರನ್ನು ಬಂಧಿಸಿದೆ. ಉಳಿದ ರಾಜ್ಯಗಳಲ್ಲಿ 2017-18ರ ಅವಧಿಯಲ್ಲಿ ಎನ್‌ಎಸ್‌ಎ ಅಡಿಯಲ್ಲಿ ಯಾವುದೇ ಬಂಧನಗಳು ನಡೆದಿಲ್ಲ.

 ಮಧ್ಯಪ್ರದೇಶ ಆಡಳಿತವು 2017ರಲ್ಲಿ 300 ಜನರನ್ನು ಬಂಧಿಸಿದ್ದು, ಈ ಪೈಕಿ 133 ಜನರನ್ನು ಬಿಡುಗಡೆ ಮಾಡಲಾಗಿದೆ ಮತ್ತು 167 ಜನರನ್ನು ಬಂಧನದಲ್ಲಿಡಲಾಗಿದೆ. ಉತ್ತರಪ್ರದೇಶ ಸರಕಾರವು 2017ರಲ್ಲಿ 171 ಜನರನ್ನು ಬಂಧಿಸಿದೆ. ಈ ಪೈಕಿ 93 ಜನರನ್ನು ಬಿಡುಗಡೆ ಮಾಡಲಾಗಿದ್ದು, 78 ಮಂದಿ ಬಂಧನದಲ್ಲಿದ್ದಾರೆ. ಇದು 2018ರಲ್ಲಿ 167 ಜನರನ್ನು ಬಂಧಿಸಿದೆ. ಅವರಲ್ಲಿ 57 ಜನರನ್ನು ಬಿಡುಗಡೆ ಮಾಡಲಾಗಿದ್ದು, 110 ಮಂದಿ ಬಂಧನದಲ್ಲಿದ್ದಾರೆ.

 ಗೃಹ ಸಚಿವ ಜಿ.ಕಿಶನ್ ರೆಡ್ಡಿಯವರು ರಾಜ್ಯಸಭೆಯಲ್ಲಿ ಈ ವಿವರಗಳನ್ನು ಒದಗಿಸಿದ್ದಾರೆ. ಸಂಸದರು ಕಳೆದ ಐದು ವರ್ಷಗಳ ವಿವರಗಳನ್ನು ಕೇಳಿದ್ದರು. ಆದರೆ ಸರಕಾರವು ಕೇವಲ ಎರಡು ವರ್ಷಗಳ ವಿವರಗಳನ್ನು ನೀಡಿದೆ.

 2014-18ರ ಅವಧಿಯಲ್ಲಿ ಯುಎಪಿಎ ಅಡಿಯಲ್ಲಿ 4,878 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಕೇವಲ 139 ಮಂದಿ ಮಾತ್ರ ಅಪರಾಧಿಗಳಾಗಿದ್ದು, 385 ಜನರನ್ನು ಖುಲಾಸೆಗೊಳಿಸಲಾಗಿದೆ.

Join Whatsapp