ಭಾರತದ ಧ್ವಜಕ್ಕೆ ಗೌರವ ಕೊಟ್ಟ ಉಕ್ರೇನ್‌, ರಷ್ಯಾ ಸೈನಿಕರು : ವೈದ್ಯಕೀಯ ವಿದ್ಯಾರ್ಥಿ ಲಾವಣ್ಯ

Prasthutha|

ಬೆಂಗಳೂರು: ಉಕ್ರೇನ್‌ಗೆ ವೈದ್ಯಕೀಯ ವ್ಯಾಸಂಗಕ್ಕಾಗಿ ತೆರಳಿದ್ದ ವಿಜಯನಗರದ ಹರಪನಹಳ್ಳಿಯ ಲಾವಣ್ಯ ಅವರು ಶುಕ್ರವಾರ ಬೆಳಗ್ಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಉಕ್ರೇನ್‌-ರಷ್ಯಾ ನಡುವಿನ  ಯುದ್ಧದ ಸಂದರ್ಭದಲ್ಲಿ   ಜೀವ ಉಳಿಸಿಕೊಂಡು ಸ್ವದೇಶಕ್ಕೆ ಬಂದಿರುವುದು ಪುನರ್‌ ಜನ್ಮ ಪಡೆದಂತಾಗಿದ್ದು,  ಕೇಂದ್ರ, ರಾಜ್ಯ ಸರ್ಕಾರಗಳು ವಹಿಸಿದ ಕಾಳಜಿಗೆ ಧನ್ಯವಾದ ಅರ್ಪಿಸಿದ್ದಾರೆ.

- Advertisement -

ರಾಜ್ಯ, ಕೇಂದ್ರ ಸರಕಾರದ ನೋಡಲ್‌ ಅಧಿಕಾರಿಗಳು ಬೆಂಗಳೂರಿನ ವಿಮಾನ ನಿಲ್ದಾಣದವರೆಗೆ ಆಗಮಿಸಿ ಲಾವಣ್ಯ ಅವರನ್ನು ತಂದೆ ಡಾ.ಜಯಕುಮಾರಸ್ವಾಮಿ ಜತೆ ಕಳಿಸಿಕೊಟ್ಟರು.

ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ್‌ ಪಿ.ಶ್ರವಣ್‌, ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್‌ ಅವರು ವಿಜಯನಗರ ಜಿಲ್ಲೆ ವಿದ್ಯಾರ್ಥಿಗಳಿಗೆ ಫೋನ್‌ ಮಾಡಿ  ಧೈರ್ಯ ನೀಡಿದ್ದನ್ನು ಲಾವಣ್ಯ ಸ್ಮರಿಸಿದರು.

- Advertisement -

ತವರಿಗೆ ಮರಳುವಾಗ ಬಹಳಷ್ಟು ವಿದ್ಯಾರ್ಥಿಗಳು, ಬೇರೆ ಬೇರೆ ರಾಷ್ಟ್ರದವರು ನಮ್ಮ ಭಾರತದ ತಿರಂಗ ಧ್ವಜಗಳನ್ನು ಕೈಯಲ್ಲಿ ಹಿಡಿದುಕೊಂಡು ಘೋಷಣೆ ಕೂಗುತ್ತಾ ಹೋಗುತ್ತಿರುವಾಗ ರಷ್ಯಾ ಸೈನಿಕರು ಯಾವ ಅಡೆತಡೆಗಳನ್ನು ಮಾಡದೆ, ಮುಂದೆ ಹೋಗಲು ಅನುಕೂಲ ಮಾಡಿ ಕೊಡುತ್ತಿರುವುದನ್ನು ಕಂಡು ಭಾರತ ದೇಶಕ್ಕೆ ಉಕ್ರೇನ್‌ ಮತ್ತು ರಷ್ಯಾ ಸೈನಿಕರು ಅಷ್ಟು ಗೌರವ ಕೊಟ್ಟಿರುವುದನ್ನು ನೆನಪಿಸಿಕೊಂಡರು.

ರಾಜ್ಯ ಮತ್ತು ಕೇಂದ್ರ ಸರಕಾರದ ಎಲ್ಲ ಅಧಿಕಾರಿಗಳಿಗೂ ಚಿರಋುಣಿಯಾಗಿರುವೆ ಎಂದು  ಲಾವಣ್ಯ ಅವರ ತಂದೆ ಜಯಕುಮಾರಸ್ವಾಮಿ ಸಂತೋಷ ವ್ಯಕ್ತಪಡಿಸಿದರು.

Join Whatsapp