ಮಂಗಳೂರು: ರಥಬೀದಿ ಕಾಲೇಜಿಗೆ ರಜೆ ಘೋಷಣೆ; ಪರೀಕ್ಷೆ ಮುಂದೂಡಿಕೆ

Prasthutha|

ಮಂಗಳೂರು: ಹಿಜಾಬ್ ಧರಿಸಿದ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಲು ಮುಂದಾದ ಘಟನೆಗೆ ಸಾಕ್ಷಿಯಾದ ನಗರದ ರಥಬೀದಿಯಲ್ಲಿರುವ ದಯಾನಂದ ಪೈ- ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ರಜೆ ಘೋಷಿಸಲಾಗಿದೆ.

- Advertisement -

ಮುಂದಿನ ಆದೇಶದವರೆಗೂ ತರಗತಿಗಳಿಗೆ ರಜೆ ನೀಡಿದ್ದಾಗಿ ಕಾಲೇಜು ಮೂಲಗಳು ತಿಳಿಸಿವೆ.‌

ಅಲ್ಲದೇ, ಪ್ರಸ್ತುತ ನಡೆಯುತ್ತಿದ್ದ ಇಂಟರ್ನಲ್ ಪರೀಕ್ಷೆಯನ್ನು ಮುಂದೂಡಿದ್ದಾಗಿ ತಿಳಿದು ಬಂದಿದೆ. ಈ ಸಂದರ್ಭ ಆನ್ ಲೈನ್ ತರಗತಿ ನಡೆಸುವುದಾಗಿ ಕಾಲೇಜಿನ ಉಪನ್ಯಾಸಕರು ತಿಳಿಸಿದ್ದಾರೆ ಎನ್ನಲಾಗಿದೆ.

- Advertisement -

ಅದಲ್ಲದೇ, ಮುಂದಿನ ಆದೇಶದವರೆಗೂ ಕ್ಯಾಂಪಸ್ ಪ್ರವೇಶಕ್ಕೂ ವಿದ್ಯಾರ್ಥಿಗಳಿಗೆ ನಿರ್ಬಂಧ ವಿಧಿಸಲಾಗಿದೆ.

ನಿನ್ನೆಯಷ್ಟೇ ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿ ಮೇಲೆ ABVP ಕಾರ್ಯಕರ್ತ ಸಾಯಿ ಸಂದೇಶ್ ಹಾಗೂ ಆತನ ಸಹಚರರು ಸೇರಿ ಹಲ್ಲೆಗೆ ಮುಂದಾಗಿದ್ದರು. ಘಟನೆ ಕುರಿತಂತೆ ಬಂದರು ಠಾಣೆಯಲ್ಲಿ ನೊಂದ ವಿದ್ಯಾರ್ಥಿನಿ ಹಿಬಾ ಶೇಖ್ ದೂರು ದಾಖಲಿಸಿದ್ದಾರೆ.‌

Join Whatsapp