ಇಂಗ್ಲೆಂಡ್: KFC ಪಾರ್ಸೆಲ್’ನಲ್ಲಿ ಫ್ರೈ ಮಾಡಿದ ಕೋಳಿಯ ತಲೆ !

Prasthutha|

ಇಂಗ್ಲೆಂಡ್: ಚಿಕನ್ ಪ್ರಿಯರ ನೆಚ್ಚಿನ ಬ್ರ್ಯಾಂಡ್ ಕೆಂಟುಕಿ ಫ್ರೈಡ್ ಚಿಕನ್ – KFC ಮತ್ತೊಮ್ಮೆ ಕೆಟ್ಟ ಕಾರಣಕ್ಕಾಗಿ ಸುದ್ದಿಯಾಗಿದೆ. KFC ಮಳಿಗೆಯಿಂದ ‘ಚಿಕನ್ ವಿಂಗ್ಸ್’ ಪಾರ್ಸೆಲ್ ತೆಗೆದುಕೊಂಡು ಹೋಗಿದ್ದ ಮಹಿಳೆಯೊಬ್ಬರು ಮನೆಯಲ್ಲಿ ಬಾಕ್ಸ್ ತೆರೆದು ನೋಡಿದಾಗ ಫ್ರೈ ಮಾಡಿದ ಕೋಳಿಯ ತಲೆಯನ್ನು ಕಂಡು ಬೆಚ್ಚಿಬಿದ್ದಿದ್ದಾರೆ.

- Advertisement -

ಇಂಗ್ಲೆಂಡ್’ನ ಟ್ವಿಕೆನ್’ಹ್ಯಾಮ್’ನಲ್ಲಿ ಘಟನೆ ನಡೆದಿದ್ದು, ಗ್ಯಾಬ್ರಿಯಲ್ಲೆ ಎಂಬಾಕೆ KFC ಫೆಲ್ತಾಮ್ ಮಳಿಗೆಯಿಂದ ‘ಚಿಕನ್ ವಿಂಗ್ಸ್’ ಪಾರ್ಸೆಲ್ ಆರ್ಡರ್ ಮಾಡಿದ್ದರು. ಆದರೆ ಮನೆಯಲ್ಲಿ ಬಾಕ್ಸ್ ತೆರೆದು ನೋಡಿದಾಗ ಕಣ್ಣು ಹಾಗೂ ಕೊಕ್ಕಿನ ಜೊತೆ ಫ್ರೈ ಮಾಡಿರುವ ಕೋಳಿಯ ತಲೆ ಸಿಕ್ಕಿದೆ. ಈ ಫೋಟೋವನ್ನು ಗ್ಯಾಬ್ರಿಯಲ್ಲೆ ಟ್ವಿಟರ್’ನಲ್ಲಿ ಪೋಸ್ಟ್ ಮಾಡಿ ತನಗಾದ ಅನುಭವದ ಬಗ್ಗೆ ಬರೆದಿದ್ದಾರೆ. ಗ್ಯಾಬ್ರಿಯಲ್ಲೆ ಟ್ವೀಟ್ ಫುಲ್ ವೈರಲ್ ಆಗಿದ್ದು, ನೆಟ್ಟಿಗರು KFC ವಿರುದ್ಧ ಕಿಡಿಕಾರಿದ್ದಾರೆ.

‘ನನಗೆ ದೊರೆತ ಪಾರ್ಸೆಲ್’ನಲ್ಲಿ ಫ್ರೈ ಮಾಡಿದ ಕೋಳಿಯ ತಲೆ ದೊರೆತಿದೆ. ಇದನ್ನು ನೋಡಿದ ಬಳಿಕ ನಾನು ವಾಂತಿ ಮಾಡಿದ್ದೇನೆ ಎಂದು ಗ್ಯಾಬ್ರಿಯಲ್ಲೆ ಟ್ವೀಟ್ ಮಾಡಿದ್ದಾರೆ. ಇದಾದ ಬಳಿಕ KFC ಫೆಲ್ತಾಮ್ ಮಳಿಗೆಗೆ ಗ್ಯಾಬ್ರಿಯಲ್ಲೆ ‘ಟು ಸ್ಟಾರ್ ರಿವ್ಯೂ’ ಕೊಟ್ಟಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ KFC, ‘ಇದು ಅಚ್ಚರಿಯ ಜೊತೆಗೆ ನಮ್ಮನ್ನು ತಬ್ಬಿಬ್ಬುಗೊಳಿಸಿದೆ. ಗ್ಯಾಬ್ರಿಯಲ್ಲೆ ಅವರನ್ನು ಸಂಪರ್ಕಿಸಿ ಇದು ಹೇಗಾಯಿತು ಎಂಬುದರ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೇವೆ ಎಂದು ಟ್ವೀಟ್ ಮಾಡಿದೆ.

Join Whatsapp