ದರ್ಶನ್ ಅರೆಸ್ಟ್: ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದೇನು?

Prasthutha|

ಬೆಂಗಳೂರು: ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಮೈಸೂರಿನಲ್ಲಿ ಅರೆಸ್ಟ್ ಆಗಿದ್ದಾರೆ. ಈ ಕೇಸ್ ಗೆ ಸಂಬಂಧಿಸಿದಂತೆ ಗೃಹ ಸಚಿವ ಜಿ. ಪರಮೇಶ್ವರ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

- Advertisement -


ರೇಣುಕಾಸ್ವಾಮಿ ಕೊಲೆ ಕೇಸ್’ನಲ್ಲಿ ದರ್ಶನ್ ರನ್ನು ಬಂಧಿಸಲಾಗಿದೆ. ಬಂಧಿಸಿರುವ ಆರೋಪಿಗಳ ವಿಚಾರಣೆ ಮಾಡುವಾಗ ದರ್ಶನ್ ಹೆಸರು ಬಂದಿದೆ ಎಂಬ ಮಾಹಿತಿ ಇದೆ. ಇದರ ಮೇಲೆ ಇನ್ನಷ್ಟು ತನಿಖೆ ನಡೆಯಬೇಕಿದೆ. ಅಲ್ಲಿಯವರೆಗೂ ಇದರ ಏನು ಹೇಳೋಕೆ ಆಗಲ್ಲ ಎಂದು ಹೇಳಿದ್ದಾರೆ.

ಈ ಕೇಸ್ ನಲ್ಲಿ ಅವರು ನೇರವಾಗಿ ಭಾಗಿಯಾಗಿದ್ದಾರಾ ಇಲ್ವಾ? ಯಾವ ಕಾರಣ ಕೊಲೆ ನಡೆದಿದೆ ಎಂದು ಇನ್ನೂ ತನಿಖೆ ಬಳಿಕ ತಿಳಿಯಬೇಕಿದೆ. ಈ ಸಂದರ್ಭದಲ್ಲಿ ಹೆಚ್ಚೇನು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಸೋಶಿಯಲ್ ಮೀಡಿಯಾ ಕಾಮೆಂಟ್ ಬಗ್ಗೆ ಗೊತ್ತಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.

Join Whatsapp