ವಿಸಾ ಅವಧಿ ಮುಗಿದವರಿಗೆ ಅ.11ರ ತನಕ ಯುಎಇ ಗಡುವು

Prasthutha|

- Advertisement -

ಕೋವಿಡ್ ಲಾಕ್ದೌನ್ ವೇಳೆ ವಿಸಾ ಅವಧಿ ಮುಗಿದವರು ಈ ತಿಂಗಳ 11ರೊಳಗೆ ತವರಿಗೆ ಮರಳಬೇಕು ಅಥವಾ ವಿಸಾವನ್ನು ಕಾನೂನು ಬದ್ದಗೊಳಿಸಬೇಕು. ಅದಕ್ಕೆ ತಪ್ಪಿದರೆ ಯುಎಇಯಲ್ಲಿ ಉಳಿದುಕೊಂಡಿರುವ ತನಕ ಪ್ರತಿದಿನ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

2020ರ ಮಾರ್ಚ್1 ರಿಂದ ಜುಲೈ12ರ ನಡುವೆ ಮುಕ್ತಾಯಗೊಳ್ಳುವ ರೆಸಿಡೆಂಟ್ ವಿಸಾ ಹೊಂದಿದವರು ಈ ತಿಂಗಳ 11ರ ಮೊದಲು ಮರಳಬೇಕು. ಅಥವಾ ಹೊಸ ವಿಸಾಕ್ಕೆ ಬದಲಾಯಿಸಿ ತಮ್ಮ ವಾಸ್ತವ್ಯವನ್ನು ಕಾನೂನುಬದ್ಧಗೊಳಿಸಬೇಕು. ಅವಧಿ ಮುಗಿದ ವಿಸಿಟಿಂಗ್ ವಿಸಾ ಹೊಂದಿರುವವರಿಗೆ ಮರಳುವ ಗಡುವು ಕಳೆದ ತಿಂಗಳು ಮುಕ್ತಾಯಗೊಂಡಿತ್ತು.

- Advertisement -

ಅವಧಿ ಮುಗಿದ ವಿಸಿಟ್ ವಿಸಾ ಹೊಂದಿರುವವರಿಗೆ ವಲಸೆ ದಂಡ ವಿಧಿಸಲಾಗುತ್ತಿದೆ. ರೆಸಿಡೆಂಟ್ ವಿಸಾ ಹೊಂದಿರುವವರು ಈ ತಿಂಗಳ 11ಕ್ಕೆ ಮುಂಚೆ ಹಿಂದಿರುಗದಿದ್ದರೆ, ಹೆಚ್ಚುವರಿ ವಾಸ್ತವ್ಯಕ್ಕೆ ಪ್ರತಿದಿನ 25 ದಿರ್ಹಮ್ ದಂಡವನ್ನು ಪಾವತಿಸಬೇಕಾಗುತ್ತದೆ. ಆರು ತಿಂಗಳ ನಂತರ ಇದು 50 ದಿರ್ಹಮ್ ಗಳಿಗೆ ಏರುತ್ತದೆ.

ಅದಾಗ್ಯೂ, ಮಾರ್ಚ್ 1 ಕ್ಕೆ ಮೊದಲೇ ವಿಸಾ ಅವಧಿ ಮುಗಿದವರು ನವೆಂಬರ್ 17ರವರೆಗೆ ದೇಶದಲ್ಲಿ ಉಳಿಯಬಹುದು. ಅವರು ಕ್ಷಮಾದಾನದ ಪ್ರಯೋಜನೆಯನ್ನು ಪಡೆಯುತ್ತಾರೆ. ಅವರಿಗೆ ಮರಳಿ ಬರಲು ಯಾವುದೇ ಅಡೆತೆಡೆ ಇರುವುದಿಲ್ಲ.

Join Whatsapp