ಹಥ್ರಾಸ್ ಕುರಿತು ವಿಶ್ವಸಂಸ್ಥೆ ಹೇಳಿಕೆ ಅನಗತ್ಯವೆಂದ ಭಾರತ

Prasthutha|

ಹೊಸದಿಲ್ಲಿ: ಹಥ್ರಾಸ್ ಮತ್ತು ಬಲರಾಮ್ಪುರ ಘಟನೆಗಳ ಕುರಿತು ಭಾರತಕ್ಕಿರುವ ವಿಶ್ವಸಂಸ್ಥೆಯ ಸಂಯೋಜಕರ ಹೇಳಿಕೆಗಳಿಗೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಭಾರತ, ಈ ಘಟನೆಗಳ ಕುರಿತು ತನಿಖೆಯು ಮುಂದುವರಿಯುತ್ತಿದ್ದು ಈ ಅವಲೋಕನವು ‘ಅನಗತ್ಯ’ವಾಗಿತ್ತು ಎಂದಿದೆ.

- Advertisement -

“ಇತ್ತೀಚಿಗಿನ ಮಹಿಳೆಯರ ವಿರುದ್ಧದ ಹಿಂಸೆಯ ಕುರಿತು ವಿಶ್ವಸಂಸ್ಥೆಯ ನಿವಾಸ ಸಂಯೋಜಕರು ಕೆಲವು ಅನಗತ್ಯ ಹೇಳಿಕೆಗಳನ್ನು ನೀಡಿದ್ದಾರೆ. ಸರಕಾರವು ಈ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡಿದೆ ಎಂದು ವಿಶ್ವಸಂಸ್ಥೆಯ ನಿವಾಸ ಸಂಯೋಜಕರು ತಿಳಿದಿರಬೇಕಿತ್ತು” ಎಂದು ವಿದೇಶಾಂಗ ವ್ಯವಹಾರ ಕಚೇರಿಯ ಅಧಿಕೃತ ವಕ್ತಾರ ಅನುರಾಗ್ ಶ್ರೀ ವಾಸ್ತವ್ ಹೇಳಿದ್ದಾರೆ.

ಭಾರತದಲ್ಲಿ ವಿಶ್ವಸಂಸ್ಥೆಯ ನಿವಾಸ ಸಂಯೋಜಕರು ಅಕ್ಟೋಬರ್ 4, 2020ರಂದು ಈ ರೀತಿಯಾಗಿ ಹೇಳಿಕೆ ನೀಡಿದ್ದರು: “ಭಾರತದಲ್ಲಿ ಮಹಿಳೆಯರು ಮತ್ತು ಹುಡುಗಿಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳ ಕುರಿತು ಭಾರತದ ವಿಶ್ವಸಂಸ್ಥೆ ಕಚೇರಿಯು ತೀವ್ರ ದು:ಖ ಮತ್ತು ಕಳವಳ ವ್ಯಕ್ತಪಡಿಸುತ್ತದೆ. ಹಥ್ರಾಸ್ ಮತ್ತು ಬಲರಾಮ್ ಪುರಗಳಲ್ಲಿ ಇತ್ತೀಚೆಗೆ ನಡೆದ ಅತ್ಯಾಚಾರ ಮತ್ತು ಹತ್ಯೆಯು ಮತ್ತೊಂದು ಜ್ನಾಪನೆಯಾಗಿದೆ. ಹಲವು ಸಾಮಾಜಿಕ ಸೂಚಿಕೆಗಳಲ್ಲಿ ಪರಿಣಾಮಕಾರಿ ಪ್ರಗತಿ ಕಂಡಿರುವ ಹೊರತಾಗಿಯೂ ಅವಕಾಶವಂಚಿತ ಸಾಮಾಜಿಕ ಗುಂಪುಗಳ ಮಹಿಳೆಯರು ಮತ್ತು ಹುಡುಗಿಯರು ಹೆಚ್ಚುವರಿ ಲಿಂಗಾಧಾರಿತ ಹಿಂಸೆಯ ಅಪಾಯವನ್ನು ಎದುರಿಸುತ್ತಾರೆ” ಎಂದು ಹೇಳಿಕೆಯು ಆತಂಕ ವ್ಯಕ್ತಪಡಿಸಿತ್ತು.

Join Whatsapp