UAE ರಾಷ್ಟ್ರೀಯ ದಿನಾಚರಣೆ| ಎರಡು ಸಾವಿರಕ್ಕೂ ಅಧಿಕ ಕೈದಿಗಳ ಬಿಡುಗಡೆ

Prasthutha|

ಅಬುಧಾಬಿ: ರಾಷ್ಟ್ರೀಯ ದಿನಾಚರಣೆಯ ಹಿನ್ನೆಲೆಯಲ್ಲಿ UAE ಎರಡು ಸಾವಿರಕ್ಕೂ ಅಧಿಕ ಕೈದಿಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

- Advertisement -

UAE ಅಧ್ಯಕ್ಷ ಶೈಖ್ ಮುಹಮ್ಮದ್ ಬಿನ್ ಝಾಯಿದ್ ಆಲ್ ನಹ್ಯಾನ್ ಅವರು 1530 ಕೈದಿಗಳನ್ನು ಬಿಡುಗಡೆ ಮಾಡಲು ಆದೇಶಿಸಿದ್ದಾರೆ. ಈ ನಡುವೆ UAE ಸುಪ್ರೀಂ ಕೌನ್ಸಿಲ್ ಸದಸ್ಯ ಮತ್ತು ಶಾರ್ಜಾ ಆಡಳಿತಗಾರ ಶೈಖ್ ಡಾ. ಸುಲ್ತಾನ್ ಬಿನ್ ಮುಹಮ್ಮದ್ ಅಲ್ ಖಾಸಿಮಿ 333 ಕೈದಿಗಳನ್ನು, UAE ಸುಪ್ರೀಂ ಕೌನ್ಸಿಲ್ ಸದಸ್ಯ ಮತ್ತು ಫುಜೈರಾದ ಆಡಳಿತಗಾರ ಶೈಖ್ ಹಮದ್ ಬಿನ್ ಮುಹಮ್ಮದ್ ಅಲ್ ಶರ್ಕಿ 153 ಕೈದಿಗಳನ್ನು ಬಿಡುಗಡೆ ಮಾಡಲು ಆದೇಶಿಸಿದ್ದಾರೆ.

ಆದ್ದರಿಂದ ಗಂಭೀರ ಅಪರಾಧಗಳಲ್ಲದ ಪ್ರಕರಣಗಳಲ್ಲಿ ಭಾಗಿಯಾಗಿರುವ ಕೈದಿಗಳಿಗೆ ಬಿಡುಗಡೆ ಭಾಗ್ಯ ಲಭಿಸಲಿದೆ. ಕೈದಿಗಳಿಗೆ ಮರುಪರಿಶೀಲನೆ ಮತ್ತು ಹೊಸ ಜೀವನವನ್ನು ನಡೆಸಲು ದಾರಿ ಮಾಡಿಕೊಡುವುದಾಗಿದೆ ಬಿಡುಗಡೆಯ ಉದ್ದೇಶ ಎಂದು UAE ಅಧ್ಯಕ್ಷ ಶೈಖ್ ಮುಹಮ್ಮದ್ ಬಿನ್ ಝಾಯಿದ್ ಆಲ್ ನಹ್ಯಾನ್ ಹೇಳಿದರು.

- Advertisement -

 ಪ್ರತಿ ವರ್ಷ, UAEಯಲ್ಲಿ ರಾಷ್ಟ್ರೀಯ ದಿನಾಚರಣೆಯ ಅಂಗವಾಗಿ ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತದೆ. ಭಾರತೀಯರು ಸೇರಿದಂತೆ ಅನೇಕ ವಲಸಿಗರು ಇದರ ಫಲಾನುಭವಿಗಳಾಗಿದ್ದಾರೆ.



Join Whatsapp