ಗುಜರಾತ್ ಚುನಾವಣೆ: ಮೊದಲ ಬಾರಿ ಮತದಾನ ಮಾಡಲಿರುವ ‘ಆಫ್ರಿಕನ್ ವಿಲೇಜ್’ ಮತದಾರರು

Prasthutha|

ಅಹಮದಾಬಾದ್: ಇದೇ ಮೊದಲ ಬಾರಿಗೆ ಗುಜರಾತ್‌ನ ಆಫ್ರಿಕನ್ ವಿಲೇಜ್ (ಆಫ್ರಿಕನ್ ಗ್ರಾಮ) ಎಂದು ಹೆಸರಾದ ಬುಡಕಟ್ಟು ಹಳ್ಳಿಯ ಜನರಿಗೆ ಮತದಾನದ ಹಕ್ಕನ್ನು ನೀಡಲಾಗಿದೆ.

- Advertisement -

ಗುಜರಾತ್‌ನ ಜುನಾಗಡ್ ಜಿಲ್ಲೆಯ ಜಾಂಬೂರ್ ಎಂಬ ಹಳ್ಳಿ ಗುಜರಾತ್‌ನ ಆಫ್ರಿಕನ್ ವಿಲೇಜ್ ಎಂದು ಖ್ಯಾತಿಯಾಗಿದೆ. ಇಲ್ಲಿ ಆಫ್ರಿಕನ್ ಮೂಲದ ಬುಡಕಟ್ಟು ಸಮುದಾಯವಿದ್ದು, ಅವರಿಗೆ ಗುಜರಾತ್ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಮತದಾನದ ಹಕ್ಕು ನೀಡಲಾಗಿದೆ. ಮತದಾನದ ಹಕ್ಕು ನೀಡಿರುವುದರಿಂದ ಜಾಂಬೂರ್ ಹಳ್ಳಿಗರು ಬುಧವಾರ ಇಡೀ ಗ್ರಾಮದಲ್ಲಿ ಸಂಭ್ರಮಾಚರಣೆ ನಡೆಸಿದ್ದಾರೆ. ಒಂದು ರೀತಿ ಗ್ರಾಮದಲ್ಲಿ ಹಬ್ಬದ ವಾತಾವರಣ ಕಂಡು ಬಂದಿದೆ.

ಏಳನೇ ಶತಮಾನದಲ್ಲಿ ಅರಬ್ ಮಾರ್ಗವಾಗಿ ಗುಜರಾತ್‌ಗೆ ಈ ಜನಾಂಗದವರು ಬಂದು ನೆಲೆಸಿದ್ದಾರೆ. ತಮ್ಮ ಸಮುದಾಯದಲ್ಲಿ ಮಾತ್ರ ವಿವಾಹವಾಗುವ ಇವರು, ಗುಜರಾತಿ ಭಾಷೆ, ಸಂಸ್ಕೃತಿಯಲ್ಲಿ ಬೆರೆತಿದ್ದಾರೆ.

- Advertisement -

ಗುಜರಾತ್ ವಿಧಾನಸಭೆಗೆ ಗುರುವಾರ (ಡಿ.1) ಮೊದಲ ಹಂತದ ಮತದಾನ ನಡೆಯಲಿದೆ. ಸೌರಾಷ್ಟ್ರ, ಕಛ್, ದಕ್ಷಿಣ ಭಾಗ ಒಳಗೊಂಡ 19 ಜಿಲ್ಲೆಗಳ 89 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

Join Whatsapp