ಯುಎಇ ಸಂಸ್ಥಾಪನಾ ದಿನ: KSCC ನಿಂದ ‘ಕಲರಿಂಗ್ ದಿ ನೇಷನ್’ ಕಾರ್ಯಕ್ರಮ

Prasthutha|

ದುಬೈ: ದುಬೈನಲ್ಲಿ ಸಮುದಾಯ ಅಭಿವೃದ್ಧಿ ಪ್ರಾಧಿಕಾರದಲ್ಲಿ (ಸಿಡಿಎ) ನೋಂದಾಯಿತ ಭಾರತದ ಜನಪ್ರಿಯ ಸಂಘಟನೆ-ಕೆಎಸ್ ಸಿಸಿ ವತಿಯಿಂದಾಗಿ 50ನೇ ಯುಎಇ ರಾಷ್ಟ್ರೀಯ ಸಂಸ್ಥಾಪನಾ ದಿನದ ಭಾಗವಾಗಿ ಸತತ ಆರನೇ ವರ್ಷವೂ ‘ಕಲರಿಂಗ್ ದಿ ನೇಷನ್’ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲಾಯಿತು.

- Advertisement -

ದುಬೈ ಕ್ರೀಕ್ ಪಾರ್ಕ್ ನಲ್ಲಿ ಯುಎಇ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ನಂತರ ಕೆ.ಎಸ್.ಸಿ.ಸಿ ಅಧ್ಯಕ್ಷ ಮುಹಮ್ಮದ್ ಇಸ್ಮಾಯಿಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾದಿ ಯುರೋಟೆಕ್ ಗ್ಯಾಸ್ ಸರ್ವೀಸಸ್ ನ ಡಾ. ಪಾಲ್, ಖಲೀಫಾ ಮತ್ತು ಕ್ಯಾಪ್ಟನ್ ಉಮರ್ ಮುಹಮ್ಮದ್ ಜುಬೈರ್ ಅಲ್ ಮಾರ್ಝೂಕಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಚಿತ್ರಕಲೆಯಲ್ಲಿ ಸುಮಾರು 20 ಕಲಾವಿದರು ಮತ್ತು 15 ಮಕ್ಕಳು ಭಾಗವಹಿಸಿ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು. ಆಹ್ವಾನಿತ ಕಲಾವಿದರು ಯುಎಇಯ ಇತಿಹಾಸ, ಸಂಸ್ಕೃತಿ, ಪರಂಪರೆ ಮತ್ತು ತ್ಯಾಗಗಳ ಸುಂದರ ಚಿತ್ರಗಳನ್ನು ಕ್ಯಾನ್ವಾಸ್ ಮೇಲೆ ಪ್ರದರ್ಶಿಸುವ ಮೂಲಕ ನೋಡುಗರ ಗಮನ ಸೆಳೆದರು.

- Advertisement -

ಯುಎಇ ಇತಿಹಾಸ, ಸಂಸ್ಕೃತಿ ಮತ್ತು ನಾಯಕತ್ವದ ಬಗ್ಗೆ ಚಿತ್ರಕಲೆ ಸ್ಪರ್ಧೆಗಳೊಂದಿಗೆ ಕಳೆದ ಐದು ವರ್ಷಗಳಿಂದ ಕೆಎಸ್ ಸಿಸಿ ‘ಕಲರಿಂಗ್ ದಿ ನೇಷನ್’ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಡೆಲ್ಫಿ ಟೆಕ್ನಾಲಜೀಸ್ ನ ಇಸ್ಮಾಯಿಲ್ ಗೋಕ್ಸ್ ಮತ್ತು ಡೀಸೆಲ್ ಲಿಂಕ್ ನ ಅಬ್ದುಲ್ ಹಮೀದ್ ಸ್ಪರ್ಧಾಳುಗಳಿಗೆ ಬಹುಮಾನಗಳು ಮತ್ತು ಸ್ಮರಣಿಕೆಗಳನ್ನು ನೀಡಿ ಗೌರವಿಸಿದರು. ಮಹಿಳೆಯರಿಗೆ ವಿನ್ಯಾಸ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮವನ್ನು ಮಂಡಳಿಯ ನಿರ್ದೇಶಕ ಮುಹಮ್ಮದ್ ಫರಾಜ್ ನಿರೂಪಿಸಿದರು. ಮಂಡಳಿಯ ಮರ್ತೋರ್ವ ಸದಸ್ಯ ಅಬ್ದುಲ್ ಗಫೂರ್ ವಂದಿಸಿದರು. ದುಬೈ ಪುರಸಭೆ ಮತ್ತು ಸಮುದಾಯ ಅಭಿವೃದ್ಧಿ ಪ್ರಾಧಿಕಾರ ಬೆಂಬಲದೊಂದಿಗೆ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

Join Whatsapp