ಕುಟುಂಬ ರಾಜಕಾರಣ ಬೇಡ ಎಂದಾದರೆ ಸಂಸತ್‌ನಲ್ಲಿ ಕಾನೂನು ಮಾಡಿಬಿಡಿ: ಹೆಚ್.ಡಿ ರೇವಣ್ಣ

Prasthutha|

ಹಾಸನ: ದಿನಾ ಬೆಳಗ್ಗೆ ಎದ್ದರೆ ನಮ್ಮದು ಕುಟುಂಬ ರಾಜಕಾರಣ ಅಂತಾರೆ. ಹಾಗಿದ್ದರೆ ಕಾಂಗ್ರೆಸ್‌ನಲ್ಲಿ ಕುಟುಂಬ ರಾಜಕಾರಣ ಇಲ್ಲವೇ? ಒಂದೇ ಮನೆಯವರು ಶಾಸಕ, ಎಂಎಲ್‌ಸಿ ಆಗಿಲ್ಲವೇ? ಎಂದು ಹಾಸನದಲ್ಲಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಪ್ರಶ್ನೆ ಮಾಡಿದ್ದಾರೆ. ಕುಟುಂಬ ರಾಜಕಾರಣ ಎನ್ನಲು ಅವರಿಗೆ ನೈತಿಕತೆ ಇದ್ಯಾ? ಕುಟುಂಬ ರಾಜಕಾರಣ ಎಂದು ಆರೋಪಿಸುವುದು ಬಿಟ್ಟು ಕಾಂಗ್ರೆಸ್, ಬಿಜೆಪಿ ಮಾಡಿರುವ ಸಾಧನೆಗಳು ಏನು? ಎಂದು ಕೇಳಿದ್ದಾರೆ.

- Advertisement -

ಕುಟುಂಬ ರಾಜಕಾರಣ ಬೇಡವೆಂದಿದ್ದರೆ ಸಂಸತ್‌ನಲ್ಲಿ ಒಂದು ಕಾನೂನು ಮಾಡಿಬಿಡಿ. ಪ್ರಾದೇಶಿಕ ಪಕ್ಷ ಮುಗಿಸಲು ಹೋಗಿ ಕಾಂಗ್ರೆಸ್‌ಗೆ ಈ ಸ್ಥಿತಿ ಬಂದಿದೆ. ಕಾಂಗ್ರೆಸ್ ನಾಯಕರಿಂದಲೇ ಕಾಂಗ್ರೆಸ್ ನಾಶವಾಗುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ. ಲೂಟಿಕೋರರ ಪಕ್ಷ ಎಂದು ಬಿಜೆಪಿ ವಿರುದ್ಧವೂ ಹಾಸನದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

Join Whatsapp