ಕೋವಿಡ್ ನಿಯಮಾವಳಿ ಉಲ್ಲಂಘನೆಯ ಹಿನ್ನೆಲೆ: ಇಂಡಿಗೋ ವಿಮಾನಕ್ಕೆ ನಿಷೇಧ ಹೇರಿದ ಯುಎಇ ಸರ್ಕಾರ

Prasthutha|

ನವದೆಹಲಿ: ಕೋವಿಡ್ ಮಾರ್ಗಸೂಚಿಯನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ದೇಶಿಯ ವಿಮಾನಯಾನ ಸಂಸ್ಥೆಯಾದ ಇಂಡಿಗೋ ವಿಮಾನ ಹಾರಾಟಕ್ಕೆ ಆಗಸ್ಟ್ 24 ರ ವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಿಷೇಧ ಹೇರಿದೆ.

- Advertisement -

ಯುಎಇ ಈ ಅದೇಶದ ಹಿನ್ನೆಲೆಯಲ್ಲಿ ವಿಮಾನ ರದ್ದತಿಯ ಬಗ್ಗೆ ಇಂಡಿಗೋ ತನ್ನ ಎಲ್ಲಾ ಪ್ರಯಾಣಿಕರಿಗೆ ಮಾಹಿತಿ ನೀಡಿದೆ. ಮಾತ್ರವಲ್ಲದೆ ಶೀಘ್ರದಲ್ಲೇ ಈ ಸಮಸ್ಯೆಯನ್ನು ಬಗೆಹರಿಸಲಾಗುವುದೆಂದು ಅದು ತಿಳಿಸಿದೆ.

ಇತ್ತೀಚೆಗೆ ಯುಎಇ ದೇಶಕ್ಕೆ ಪ್ರವೇಶ ನಿರ್ಬಂಧಗಳನ್ನು ಸಡಿಲಗೊಳಿಸಿದ್ದು ಶಾಶ್ವತ ನಿವಾಸಿಗಳು ದೇಶವನ್ನು ಪ್ರವೇಶಿಸಲು ಅನುವು ಮಾಡಿಕೊಟ್ಟಿತ್ತು. ಆದರೆ ಪ್ರಯಾಣಿಕರು ನಿರ್ಗಮನಕ್ಕೆ 48 ಗಂಟೆಗಳ ಮೊದಲು ಆರ್ಟಿ-ಪಿಸಿಆರ್ ಪರೀಕ್ಷೆ ಮತ್ತು ವಿಮಾನಕ್ಕೆ ಕೆಲವು ಗಂಟೆಗಳ ಮೊದಲು ಮತ್ತೊಂದು ಆರ್ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಈ ನಿಯಮ ಆಗಸ್ಟ್ 5 ರಿಂದ ಜಾರಿಗೊಳಿಸಲಾಗಿದೆ.

- Advertisement -

ಭಾರತ, ಪಾಕಿಸ್ತಾನ, ನೇಪಾಳ, ಶ್ರೀಲಂಕಾ, ನೈಜೀರಿಯಾ ಮತ್ತು ಉಗಾಂಡದ ಪ್ರವಾಸಿಗರಿಗೆ ಯುಎಇ ಕೋವಿಡ್ -19 ಪರೀಕ್ಷೆಯನ್ನು ಕಡ್ಡಾಯಗೊಳಿಸಿದೆ.

ಹೆಚ್ಚಿನ ಪ್ರಯಾಣಿಕರು ಯುಎಇ ಅಧಿಕಾರಿಗಳಿಂದ ಅನುಮೋದನೆ ಪತ್ರವನ್ನು ಪಡೆಯಬೇಕಾಗುತ್ತದೆ. ವಿಮಾನ ನಿಲ್ದಾಣದಲ್ಲಿ ವಿಮಾನಯಾನ ಚೆಕ್-ಇನ್ ಸಿಬ್ಬಂದಿಯು ಪ್ರಯಾಣಿಕರನ್ನು ವಿಮಾನದಲ್ಲಿ ಪ್ರವೇಶಿಸಲು ಅನುಮತಿಸುವ ಮೊದಲು ಪರೀಕ್ಷಾ ವರದಿಯನ್ನು ಪರಿಶೀಲಿಸಬೇಕಾಗುತ್ತದೆ. ಈ ದಾಖಲೆಗಳನ್ನು ಯುಎಇ ವಿಮಾನ ನಿಲ್ದಾಣದಲ್ಲಿ ಬಂದ ನಂತರ ಪರಿಶೀಲಿಸಲಾಗುತ್ತದೆ.

ಇಂಡಿಗೋ ಸಂಸ್ಥೆಯಿಂದ ಯುಎಇ ಕೋವಿಡ್ ಮಾರ್ಗಸೂಚಿಯನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಸರ್ಕಾರ ಇಂಡಿಗೋ ಮೇಲೆ ನಿಷೇಧ ಹೇರಿ ಆದೇಶ ಹೊರಡಿಸಿದೆ.

Join Whatsapp