ಕುವೈತ್‌ | ಕಟ್ಟಡದಲ್ಲಿ ಭೀಕರ ಬೆಂಕಿ ಅವಘಡ: 43 ಮಂದಿ ಸಾವು

Prasthutha|

- Advertisement -

ಮೃತರಲ್ಲಿ 10 ಮಂದಿ ಭಾರತೀಯರು

ಕುವೈತ್‌: ಕಾರ್ಮಿಕರು ವಾಸಿಸುತ್ತಿದ್ದ ಆರು ಅಂತಸ್ತಿನ ಕಟ್ಟಡವೊಂದರಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ಕನಿಷ್ಠ 43 ಮಂದಿ ಮೃತಪಟ್ಟಿರುವ ಘಟನೆ ದಕ್ಷಿಣ ಕುವೈತ್‌ ನ ಅಹ್ಮದಿ ಗವರ್ನರೇಟ್‌ ನ ಮಂಗಫ್‌ ಬ್ಲಾಕ್‌ ನಲ್ಲಿ ನಡೆದಿದೆ.

- Advertisement -

ಇವರಲ್ಲಿ ಐದು ಮಂದಿ ಕೇರಳಿಗರ ಸಹಿತ 10 ಮಂದಿ ಭಾರತೀಯರಿದ್ದಾರೆಂದು ವರದಿ ಯಾಗಿದೆ.

ಈ ದುರಂತದಲ್ಲಿ ಗಾಯಗೊಂಡ ಸುಮಾರು 40 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆ ಇನ್ನೂ ದೃಢಪಟ್ಟಿಲ್ಲ. ಬೆಂಕಿಯನ್ನು ನಂದಿಸಲಾಗಿದ್ದು ಅವಘಡಕ್ಕೆ ಕಾರಣವೇನೆಂದು ತನಿಖೆ ನಡೆಸಲಾಗುತ್ತಿದೆ.

Join Whatsapp