ಹಾವು ಕಚ್ಚಿ ಎರಡು ವರ್ಷದ ಮಗು ಮೃತ್ಯು

Prasthutha|

ಶಿರಸಿ: ಹಾವು ಕಚ್ಚಿ ಮಗು ಮೃತಪಟ್ಟ ಘಟನೆ ಬನವಾಸಿ ದಾಸನಕೊಪ್ಪ ವೃತ್ತದಲ್ಲಿ ನಡೆದಿದೆ.

- Advertisement -


ತರಾನ್ ಮುಹಮ್ಮದ್ ಸಾಬ್ (2) ಮೃತ ಮಗು. ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮಗು ಏನೋ ಕಚ್ಚಿದೆ ಎಂದು ಅಳುತ್ತಾ ಸನ್ನೆ ಮಾಡುತ್ತಿತ್ತು. ಇರುವೆ ಕಚ್ಚಿರಬಹುದೆಂದು ಸುಮ್ಮನಾಗಿದ್ದ ಪೋಷಕರಿಗೆ ಆಘಾತ ಕಾದಿತ್ತು. ಮಗುವಿನ ಬಾಯಿಯಲ್ಲಿ ನೊರೆ ಬರಲು ಪ್ರಾರಂಭವಾಗಿರುವುನ್ನು ಗಮನಿಸಿದ ಮನೆಯವರು ತಕ್ಷಣವೇ ಆಸ್ಪತ್ರೆಗೆ ಸಾಗಿಸಿದ್ದಾರೆ.


ವೈದ್ಯರು ಪರೀಕ್ಷಿಸಿ ಮಗುವಿಗೆ ಹಾವು ಕಚ್ವಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ಆ ಹೊತ್ತಿಗಾಗಲೇ ಮಗುವಿನ ಪ್ರಾಣ ಪಕ್ಷಿ ಹಾರಿತ್ತು. ಈ ಬಗ್ಗೆ ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp