ಎಲ್ಲರಿಗೂ ಕೊಡ್ಬೇಕು, ಎರಡು ಸಾವಿರ ಸಾಕಾಗಲ್ಲ: ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯಿಂದ ಲಂಚಕ್ಕೆ ಬೇಡಿಕೆ, ವೀಡಿಯೋ ವೈರಲ್

Prasthutha|

ಬೆಂಗಳೂರು: ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಸಿಬ್ಬಂದಿಯೊಬ್ಬರು ರೋಗಿಗಳಿಂದ ಲಂಚಕ್ಕೆ ಬೇಡಿಕೆ ಇಡುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ.

- Advertisement -

ನೀವು ಬರೀ 2000 ಕೊಟ್ರೆ ನಾನು ಹೋಗಿ ಐದು ನೂರು ಐದು ನೂರು ಎಲ್ಲರಿಗೂ ಹಂಚುವುದಕ್ಕೆ ಆಗಲ್ಲ, ನಮ್ಮದು 6000 ಫಿಕ್ಸ್ ಲಂಚ ಅಂದ್ರೆ ಲಂಚ ಎಂದು ಗಾರ್ಮೆಂಟ್ ನೌಕರೊಬ್ಬರಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಯ ಸಾರ್ವಜನಿಕ ಆಸ್ಪತ್ರೆಯೊಂದರ ಮಹಿಳಾ ನೌಕರರೊಬ್ಬರು ಹಣಕ್ಕಾಗಿ ಬೇಡಿಕೆ ಇಟ್ಟಿರುವ  ವೀಡಿಯೋ ಬೊಮ್ಮಾಯಿ ಸರ್ಕಾರದಡಿ ರಾಜ್ಯದಲ್ಲಿನ ವ್ಯವಸ್ಥೆ ಹೇಗಿದೆ ಎಂಬುದನ್ನು ಅನಾವರಣ ಮಾಡಿದಂತಿದೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ.

ಈ ವೀಡಿಯೋ ಬಗ್ಗೆ ಪ್ರತಿಕ್ರಿಯಿಸಿರುವ ಸಾಮಾಜಿಕ ಹೋರಾಟಗಾರರು, ಪರ್ಸಂಟೇಜ್ ಅವಾಂತರ ಸಂಬಂಧ ಬೇರೆ ಇನ್ನೇನು ಸಾಕ್ಷಿ ಬೇಕು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಪ್ರಶ್ನಿಸಿದ್ದಾರೆ. ಇದು ಎಲ್ಲಿ ಯಾವಾಗ ನಡೆದಿದೆ ಎಂಬುದನ್ನು ಪತ್ತೆ ಹಚ್ಚಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕೆಂದೂ ಒತ್ತಾಯಿಸಿದ್ದಾರೆ.

- Advertisement -

ಇವರಿಗೆ ತಿಂಗಳಿಗೆ ಇಷ್ಟು ಸಂಗ್ರಹಿಸಿ ಕೊಡಬೇಕು ಎಂದು ಗುರಿ ನಿಗದಿ ಪಡಿಸುತ್ತಾರೆ. ಇವರೆಲ್ಲಾ ತಿಗಣೆ ಹಾಗೆ ಜನರ ರಕ್ತ ಹೀರಿ ತಾವು ಕುಶಿ ಪಟ್ಟು, ಉನ್ನತ ಮಟ್ಟದ ಮಹಾತ್ಮರಿಗೆ ವ್ಯವಸ್ಥೆ ಮಾಡುವ ಅನಿವಾರ್ಯತೆ ಇರುತ್ತೆ. ಇದು ಎಲ್ಲಾ ಇಲಾಖೆಯಲ್ಲಿ ಸಹಜ. ಸರಕಾರ ಹಾಗೂ ವ್ಯವಸ್ಥೆ ಸೇರಿ ಮಾಡುವ ದಂಧೆ. ಇನ್ನು ನಿಯಂತ್ರಿಸುವವರು ಯಾರು?  ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Whatsapp