ವಿಧವೆಯರ ಹಕ್ಕುಗಳನ್ನು ರಕ್ಷಿಸಲು ನಿರ್ಣಯ ಕೈಗೊಂಡ ಮಹಾರಾಷ್ಟ್ರದ ಎರಡು ಗ್ರಾಮಗಳು

Prasthutha|

ಮುಂಬೈ: ವಿಧವೆಯರನ್ನು ಬಹಿಷ್ಕರಿಸುವ ಹಳೆಯ ಪ್ರತಿಗಾಮಿ ಆಚರಣೆಗಳನ್ನು ನಿಷೇಧಿಸುವ ನಿರ್ಣಯವನ್ನು  ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಎರಡು ಗ್ರಾಮಗಳು ಅಂಗೀಕರಿಸಿವೆ.

- Advertisement -

ಶಿರೋಲ್ ತಹಸಿಲ್ ನ ಹೆರ್ವಾಡ್ ಗ್ರಾಮ ಮತ್ತು ಕೊಲ್ಲಾಪುರ ಜಿಲ್ಲೆಯ ಹಾಟ್ ಕಾನಂಗ್ಲೆ ತಹಸಿಲ್ ನ ಐತಿಹಾಸಿಕ ಮಂಗಾಂವ್ ಮಹಾರಾಷ್ಟ್ರ ದಿನದಂದು (ಮೇ 1) ನಡೆದ ಗ್ರಾಮಸಭೆಗಳಲ್ಲಿ ಈ ಸಂಬಂಧ ನಿರ್ಣಯವನ್ನು ಅಂಗೀಕರಿಸಿದವು.

 “ಗಂಡ ಸತ್ತಾಗ, ಮಹಿಳೆ ತನ್ನ ಸಿಂಧೂರವನ್ನು ಒರೆಸುವುದು, ಮಂಗಳಸೂತ್ರವನ್ನು ತೆಗೆಯುವುದು, ಬಳೆಗಳನ್ನು ಒಡೆಯುವುದು ಮತ್ತು ಕಾಲ್ಬೆರಳ ಉಂಗುರವನ್ನು ತೆಗೆಯುವುದು ಮುಂತಾದ ಆಚರಣೆಗಳಿಗೆ ಒಳಗಾಗುತ್ತಾರೆ. ಅದೇ ರೀತಿ ಯಾವುದೇ ಧಾರ್ಮಿಕ ಅಥವಾ ಸಾಮಾಜಿಕ ಕೂಟಗಳಿಂದ ಅವಳಿಗೆ ನಿರ್ಬಂಧ ಹೇರಲಾಗುತ್ತದೆ. ವಿವಾಹಿತ ಮಹಿಳೆಯಾಗಿ ಅವಳ ಸಾಮಾಜಿಕ ಸ್ಥಾನಮಾನವನ್ನು ಕಸಿದುಕೊಳ್ಳಲಾಗುತ್ತದೆ. ಇಂತಹ ಆಚರಣೆಗಳು ಆಕೆಯ ಹಕ್ಕುಗಳನ್ನು ಕಸಿದುಕೊಳ್ಳುತ್ತವೆ ಮತ್ತು ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತವೆ. ಆದ್ದರಿಂದ ಇನ್ನು ಮುಂದೆ ನಮ್ಮ ಗ್ರಾಮಗಳಲ್ಲಿ ಅಂತಹ ಯಾವುದೇ ಆಚರಣೆಗಳನ್ನು ನಿಷೇಧಿಸಲಾಗಿದೆ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.

Join Whatsapp