ಟ್ವಿಟರ್ ನಲ್ಲಿ ಡಿಕೆಶಿಗೆ ರಮ್ಯಾ ಟಕ್ಕರ್ | ಬಂಡೆಗೆ ಗುದ್ದಿದ ಮೋಹಕ ತಾರೆ

Prasthutha: May 12, 2022

ಬೆಂಗಳೂರು: ವಂಚನೆ ಆರೋಪದ ಬಗ್ಗೆ ನಿರಂತರವಾಗಿ ಟ್ವೀಟ್ ಮಾಡುತ್ತಿರುವ ನಟಿ ರಮ್ಯಾ, ಕಾಂಗ್ರೆಸ್ ಅಧ್ಯಕ್ಷರು ಅವಕಾಶವಾದಿ ನನ್ನನ್ನು ಹತ್ತಿಕ್ಕಲು ಪ್ರಯತ್ನ ಮಾಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ರಾಜೀನಾಮೆ ವಿಷಯವಾಗಿ ವಂಚನೆ ಆರೋಪ ಎದುರಿಸುತ್ತಿರುವ ರಮ್ಯಾರೊಂದಿಗೆ ನಿಮ್ಮನ್ನು ಪಕ್ಷಕ್ಕೆ ಪರಿಚಯಿಸಿದ ರಾಜಕೀಯ ನಾಯಕನಿಗೇ ಪಕ್ಷದ ಪಾಠ ಮಾಡಲು ನೀನು ಅರ್ಹಳಲ್ಲ, ಪಕ್ಷಕ್ಕೆ ಅವರು ಮಾಡಿದ ತ್ಯಾಗದ ಬಗ್ಗೆ ನಿಮಗೆ ಅರಿವಿದ್ದರೆ ಮಾತ್ರ ಮಾತಾಡಿ ಎಂದು ಕ್ಲಾಸ್ ತೆಗೆದವರಿಗೆ ಪ್ರತಿಕ್ರಯಿಸಿದ ರಮ್ಯಾ, ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.

ನನಗೆ ಅವಕಾಶಗಳನ್ನು ನೀಡಿದ ಮತ್ತು ನನ್ನೊಂದಿಗೆ ನಿಂತ ಯಾರಾದರೂ ಇದ್ದರೆ ಅದು ರಾಹುಲ್ ಗಾಂಧೀ ಮಾತ್ರ. ನನಗೆ ಅವಕಾಶಗಳನ್ನು ‘ಕೊಟ್ಟಿದ್ದೇನೆ’ ಎಂದು ಹೇಳಿಕೊಳ್ಳುವವರು ಅವಕಾಶವಾದಿ. ಈ ಅವಕಾಶವಾದಿಗಳು ಕೇವಲ ನನ್ನನ್ನು ಹತ್ತಿಕ್ಕಲು ಪ್ರಯತ್ನಿಸಿದ್ದಾರೆ. ಟಿವಿಯಲ್ಲಿ ನೀವು ನೋಡುವುದೆಲ್ಲವೂ ಅವರ ವಂಚಕ ಮನಸ್ಸನ್ನು ಮರೆಮಾಚುವ ಪ್ರಹಸನವಾಗಿದೆ ಎಂದು ಪ್ರತಿಕ್ರಯಿಸಿದ್ದಾರೆ.

ಡಿಕೆಶಿ ವಿರುದ್ಧದ ರಮ್ಯಾ ಟ್ವೀಟಿಗೆ ಪ್ರತಿಕ್ರಯಿಸಿದ ಬಿಜೆಪಿ, ಡಿಕೆಶಿ ವಿರುದ್ಧ ಮಾಜಿ ಸಂಸದೆ ರಮ್ಯಾ ತಿರುಗಿಬಿದ್ದಿದ್ದಾರೆ.  ಅಸಹಾಯಕ ಡಿಕೆಶಿ ಅವರೇ, ನೀವೇ ಬೆಳೆಸಿದ ರಮ್ಯಾ ನೇತೃತ್ವದಲ್ಲಿ ಮತ್ತಷ್ಟು ನಕಲಿ ಖಾತೆ ಜನಿಸಲಿದ್ದು, ನಿಮ್ಮದೇ ಮೂಗಿನ ಕೆಳಗೆ ನಿಮ್ಮ ವಿರುದ್ಧವೇ ಟೂಲ್ ಕಿಟ್ ಹಣೆಯಲಾಗುತ್ತಿದೆ. ಇದರ ಹಿಂದೆ ಮೀರ್ ಸಾದಿಕ್ ಕೈವಾಡವಿದೆ, ಎಚ್ಚರ! ಎಂದು  ವ್ಯಂಗ್ಯವಾಡಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!