ಪಾರ್ಟಿ ನೆಪದಲ್ಲಿ ಯುವತಿಯರನ್ನು ಕರೆಸಿ ಅತ್ಯಾಚಾರ ಯತ್ನ: ಇಬ್ಬರ ಬಂಧನ

Prasthutha|

ಬೆಂಗಳೂರು: ಪಾರ್ಟಿ ಮಾಡೋಣ ಬನ್ನಿ ಎಂದು ಯುವತಿಯರನ್ನು ಕರೆದು ಅತ್ಯಾಚಾರ ಮಾಡಲು ಪ್ರಯತ್ನಿಸಿದ ಇಬ್ಬರು ಆರೋಪಿಗಳನ್ನು ವಿವೇಕನಗರ ಪೊಲೀಸರು ಬಂಧಿಸಿದ್ದಾರೆ.

- Advertisement -


ಕಾಶ್ಮೀರಿ ಮೂಲದ ಯುವತಿ ಹಾಗೂ ಇನ್ನೊಬ್ಬ ಸ್ನೇಹಿತೆಯನ್ನು ಪಾರ್ಟಿ ಮಾಡಲು ಬಂಧಿತ ಇಬ್ಬರು ಯುವಕರು ಕರೆದಿದ್ದು ಮದ್ಯಪಾನ ಮಾಡಿದ ಬಳಿಕ ಇಬ್ಬರು ಯುವತಿಯರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎನ್ನಲಾಗಿದೆ.


ಆರೋಪಿಗಳಿಂದ ಪಾರಾಗಲು ಯುವತಿಯರು ವಾಶ್ ರೂಂ ಸೇರಿ ಚಿಲಕ ಹಾಕಿಕೊಂಡಿದ್ದು ಬಳಿಕ ವಿವೇಕನಗರ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಇಬ್ಬರು ವಿವೇಕನಗರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Join Whatsapp