ಭೂಕಂಪನದ ಅವಶೇಷಗಳಡಿ ಪತ್ತೆಯಾದ ಫುಟ್ಬಾಲ್ ಆಟಗಾರ ಕ್ರಿಶ್ಚಿಯನ್ ಅಟ್ಸು

Prasthutha|

ಅಕ್ರಾ: ಘಾನಾ ರಾಷ್ಟ್ರೀಯ ಫುಟ್ಬಾಲ್ ಆಟಗಾರ ಕ್ರಿಶ್ಚಿಯನ್ ಅಟ್ಸು ಅವರು ಟರ್ಕಿ ಮತ್ತು ನೆರೆಯ ಸಿರಿಯಾದಲ್ಲಿ ಸಂಭವಿಸಿದ ಭೂಕಂಪನದ ಅವಶೇಷಗಳಡಿಯಲ್ಲಿ ಜೀವಂತವಾಗಿ ಪತ್ತೆಯಾಗಿದ್ದಾರೆ.

- Advertisement -


ಕ್ರಿಶ್ಚಿಯನ್ ಅಟ್ಸು ಜೀವಂತವಾಗಿ ಪತ್ತೆಯಾಗಿರುವುದನ್ನು ಟರ್ಕಿಯ ಘಾನಾ ರಾಯಭಾರಿ ಮಂಗಳವಾರ ದೃಢಪಡಿಸಿದೆ.


31ರ ಹರೆಯದ ಅಟ್ಸು ಸೆಪ್ಟೆಂಬರ್’ನಲ್ಲಿ ಟರ್ಕಿಯ ಸೂಪರ್ ಲಿಗ್ ಸೈಡ್ ಹಟಾಯಸ್ ಪೊರ್’ಗೆ ಸೇರ್ಪಡೆಯಾಗಿದ್ದರು. ಇದು ಸೋಮವಾರ ಉಂಟಾದ ಭಾರಿ ಭೂಕಂಪದ ಕೇಂದ್ರಬಿಂದುವಾದ ದಕ್ಷಿಣ ಪ್ರಾಂತ್ಯದ ಸಮೀಪದಲ್ಲಿದೆ.

- Advertisement -


“ಶುಭ ಸುದ್ದಿ ಬರುತ್ತಿದೆ. ಕ್ರಿಶ್ಚಿಯನ್ ಅಟ್ಸು ಹಟೇಯಲ್ಲಿ ಕಂಡುಬಂದಿದ್ದಾರೆ ಎಂದು ಘಾನಾ ಅಸೋಸಿಯೇಷನ್ ಅಧ್ಯಕ್ಷರಿಂದ ನಾನು ಮಾಹಿತಿ ಪಡೆಯುತ್ತಿದ್ದೇನೆ” ಎಂದು ಸ್ಥಳೀಯ ಘಾನಾ ಸಮುದಾಯ ಸಂಘವನ್ನು ಉಲ್ಲೇಖಿಸಿ ಅಶಿಟೆ-ಒಡುಂಟನ್, ಅಸಾಸ್ ರೇಡಿಯೋಗೆ ತಿಳಿಸಿದ್ದಾರೆ.

Join Whatsapp