ಟಿವಿ ಚಾನೆಲ್ ಗಳು ತಮ್ಮ ರೇಟಿಂಗ್ ಹೆಚ್ಚಿಸಲು ‘ದ್ವೇಷ’ ಪ್ರಚಾರ ಮಾಡುತ್ತಿದೆ: ಸುಪ್ರೀಂ ಕೋರ್ಟ್

Prasthutha|

►ಸುದ್ದಿವಾಹಿನಿಗಳ ದ್ವೇಷ ಪ್ರಸಾರ ನಿಯಂತ್ರಣ ಕಾನೂನು ರಚಿಸಲು ಕೇಂದಕ್ಕೆ ಗಡುವು

- Advertisement -

ನವದೆಹಲಿ: ದ್ವೇಷ ಭಾಷಣವನ್ನು ದೇಶದ ಸಾಮಾಜಿಕ ಚೌಕಟ್ಟಿನ ಮೇಲೆ ಪರಿಣಾಮ ಬೀರುವ “ವಿಷ” ಎಂದು ಬಣ್ಣಿಸಿರುವ ಸುಪ್ರೀಂ ಕೋರ್ಟ್, ಟಿವಿ ಚಾನೆಲ್ ಗಳು ತಮ್ಮ ರೇಟಿಂಗ್ ಗಳನ್ನು ಹೆಚ್ಚಿಸಲು ‘ದ್ವೇಷ ಮತ್ತು ಅಂತಹ ಎಲ್ಲಾ ಮಸಾಲೆಯುಕ್ತ’ ವಿಷಯಗಳನ್ನು ಬಳಸುತ್ತಿವೆ ಎಂದು ಹೇಳಿದ್ದು, ಇಂತಹ ಸುದ್ದಿವಾಹಿನಿಗಳನ್ನು ಸರಕಾರ ಯಾಕೆ ನಿಯಂತ್ರಿಸುತ್ತಿಲ್ಲ ಎಂದು ಕೇಂದ್ರ ಸರಕಾರವನ್ನು ನ್ಯಾಯಾಲಯ ಪ್ರಶ್ನಿಸಿದೆ.

ದೂರದರ್ಶನ ಚರ್ಚೆಗಳ ಮೂಲಕ ಪ್ರಸಾರವಾಗುತ್ತಿರುವ ಹಲವು ಹೇಳಿಕೆಗಳ ವಿರುದ್ಧ ಪ್ರತಿಬಂಧಕವಾಗಿ ಕಾರ್ಯನಿರ್ವಹಿಸುವ ಕಾನೂನು ಚೌಕಟ್ಟಿನ ಕೊರತೆಯನ್ನು ಖಂಡಿಸಿದ ಸುಪ್ರೀಂ, “ದ್ವೇಷ ಭಾಷಣ” ವನ್ನು ದಂಡನೀಯ ಅಪರಾಧವನ್ನಾಗಿ ಮಾಡಲು ಕಾನೂನು ತರಲು ಉದ್ದೇಶಿಸಿದೆಯೇ ಎಂದು ನಿರ್ಧರಿಸಲು ಕೇಂದ್ರಕ್ಕೆ ಎರಡು ತಿಂಗಳ ಕಾಲಾವಕಾಶ ನೀಡಿದೆ.

- Advertisement -

ಟಿವಿ ಚಾನೆಲ್ಗಳು ತಮ್ಮ ರೇಟಿಂಗ್ಗಳನ್ನು ಹೆಚ್ಚಿಸಲು ಇಂತಹ ಕಸರತ್ತು ಮಾಡುವಾಗ ಸರ್ಕಾರವು ಏಕೆ ಮೂಕ ಪ್ರೇಕ್ಷಕ ಎಂದು ನ್ಯಾಯಾಲಯ ಪ್ರಶ್ನಿಸಿದ್ದು, ದ್ವೇಷ ಭಾಷಣವನ್ನು ಪ್ರಸಾರ ಮಾಡದಂತೆ ತಡೆಯುವುದು ಟಿವಿ ನಿರೂಪಕನ ಕರ್ತವ್ಯವಾಗಿದೆ ಎಂದು ಹೇಳಿದೆ. ಟಿವಿ ಚರ್ಚೆಗಳು ದ್ವೇಷವನ್ನು ಉಗುಳುವ ಸಮಸ್ಯೆಯ ಭಾಗವಾಗಿದೆ, ಮುಸ್ಲಿಮರ ಮೇಲೆ ಗುರಿಯಾಗಿಸಿ ನಡೆಯುವ ಚರ್ಚೆಗಳಿಗೆ ಮಾರ್ಗಸೂಚಿ ಮಾಡಬೇಕಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

“ಯುಪಿಎಸ್ಸಿ ಜಿಹಾದ್” ಎಂಬ ಸುದರ್ಶನ್ ನ್ಯೂಸ್ ಟಿವಿ ಪ್ರಸಾರ ಮಾಡಿದ ಕಾರ್ಯಕ್ರಮದ ವಿರುದ್ಧ ಅರ್ಜಿಗಳು ಸೇರಿ ಸುದ್ದಿವಾಹಿನಿಗಳ ದ್ವೇಷ ಭಾಷಣವನ್ನು ಪ್ರಸಾರ ಮಾಡುವುದನ್ನು ನಿಯಂತ್ರಿಸಲು ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ರೀತಿ ಸ್ಪಷ್ಟನೆ ನೀಡಿದೆ.

Join Whatsapp