ಕೇರಳದಲ್ಲೂ SDPI, PFI ಕಚೇರಿ, ನಾಯಕರ ಮನೆ ಮೇಲೆ NIA ದಾಳಿ

Prasthutha|

►ಕೇಂದ್ರ ಏಜೆನ್ಸಿಗಳ ರಾಜಕೀಯ ಪ್ರೇರಿತ ಬೇಟೆಯ ವಿರುದ್ಧ ಕಾರ್ಯಕರ್ತರಿಂದ ಪ್ರತಿಭಟನೆ

- Advertisement -

ಕೋಯಿಕ್ಕೋಡ್: SDPI ರಾಜ್ಯ ಹಾಗೂ ಜಿಲ್ಲಾ ಸಮಿತಿ ಕಚೇರಿಗಳು ಮತ್ತು ರಾಜ್ಯದ SDPI, PFI ನಾಯಕರ ಮನೆಗಳು, ಕಚೇರಿಗಳ ಮೇಲೆ ಎನ್ಐಎ ಮತ್ತು ಇಡಿಯ ಕೇಂದ್ರೀಯ ಏಜೆನ್ಸಿಗಳು ದಾಳಿ ನಡೆಸಿದ್ದು, ಶೋಧ ನಡೆಸುತ್ತಿದ್ದಾರೆ.

ಪಾಪ್ಯುಲರ್ ಫ್ರಂಟ್ ರಾಷ್ಟ್ರೀಯ ಕಾರ್ಯದರ್ಶಿ ನಾಸಿರುದ್ದೀನ್ ಎಲಮರಾಮ್ ಮತ್ತು ರಾಜ್ಯ ಸಮಿತಿ ಸದಸ್ಯ ಯಹಿಯಾ ತಂಙಳ್ ಅವರನ್ನು ತ್ರಿಶೂರ್ ನಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸತ್ತಾರ್, ರಾಷ್ಟ್ರೀಯ ಅಧ್ಯಕ್ಷ ಒ.ಎಂ.ಎ.ಸಲಾಂ, ಕರಮನ ಅಶ್ರಫ್ ಮೌಲವಿ, ಮಾಜಿ ಅಧ್ಯಕ್ಷ ಇ.ಅಬೂಬಕ್ಕರ್, ಪಥನಂತಿಟ್ಟ ಜಿಲ್ಲಾ ಕಾರ್ಯದರ್ಶಿ ಸಾದಿಕ್ ಅಹಮ್ಮದ್ ಅವರ ಮನೆಗಳ ಮೇಲೂ ದಾಳಿ ನಡೆಸಲಾಗಿದೆ.

- Advertisement -

ಎನ್ಐಎ ದಾಳಿ ಬೆಳಿಗ್ಗೆ 4 ಗಂಟೆಗೆ ಪ್ರಾರಂಭವಾಗಿದ್ದು, ರಾಜ್ಯ ಸಮಿತಿ ಕಚೇರಿಯ ಮೇಲೂ ದಾಳಿ ನಡೆಸಲಾಗುತ್ತಿದೆ. ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರು ಕೇಂದ್ರ ಏಜೆನ್ಸಿಗಳ ರಾಜಕೀಯ ಪ್ರೇರಿತ ಬೇಟೆಯ ವಿರುದ್ಧ ಪ್ರತಿಭಟಿಸುತ್ತಿದ್ದಾರೆ.

ಪಾಪ್ಯುಲರ್ ಫ್ರಂಟ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎ ಅಬ್ದುಲ್ ಸತ್ತಾರ್ ಅವರು ಮಧ್ಯರಾತ್ರಿಯ ದಾಳಿಯು ದೇಶದ ಭಯೋತ್ಪಾದನೆಯ ಇತ್ತೀಚಿನ ಉದಾಹರಣೆಯಾಗಿದೆ ಎಂದು ಹೇಳಿದರು. ಏಜೆನ್ಸಿಗಳನ್ನು ಬಳಸಿಕೊಂಡು ಭಿನ್ನಮತೀಯ ಧ್ವನಿಗಳನ್ನು ಅಡಗಿಸುವ ಫ್ಯಾಸಿಸ್ಟ್ ಆಡಳಿತದ ಕ್ರಮಗಳ ವಿರುದ್ಧ ನಾವು ಬಲವಾಗಿ ಪ್ರತಿಭಟಿಸಬೇಕು ಎಂದು ಅವರು ಹೇಳಿದರು.

Join Whatsapp