ಮಂಗಳೂರು: ಬೆಳ್ಳಂಬೆಳಗ್ಗೆ SDPI,PFI ಜಿಲ್ಲಾ ಕಚೇರಿ ಸೇರಿದಂತೆ ನಾಯಕರ ಮನೆ ಮೇಲೆ ಎನ್ಐಎ ದಾಳಿ

Prasthutha|

ಕಾರ್ಯಕರ್ತರಿಂದ ‘ಗೋ ಬ್ಯಾಕ್ NIA’ ಘೋಷಣೆ

- Advertisement -

ಮಂಗಳೂರು: ಗುರುವಾರ ಬೆಳ್ಳಂಬೆಳಗ್ಗೆ ಎನ್ಐಎ ಅಧಿಕಾರಿಗಳು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಜಿಲ್ಲಾ ಕಚೇರಿ ಸೇರಿದಂತೆ ಪಿಎಫ್ಐ ನಾಯಕರ ಮನೆ ಮೇಲೆ ದಾಳಿ ನಡೆಸಿದ್ದಾರೆ.

ಕಳೆದ ಕೆಲವು ದಿನಗಳಿಂದ ರಾಜ್ಯ ಪಿಎಫ್ ಐ ನಾಯಕರ ಮನೆ ಮೇಲೆ ದಾಳಿ ನಡೆಸುತ್ತಿರುವ ಎನ್ಐಎ ಇಂದು ಮಂಗಳೂರು ಹೊರವಲಯದ ಬಜ್ಪೆ, ಜೋಕಟ್ಟೆ ಸೇರಿದಂತೆ ಕೆಲವೆಡೆ ರಾಜ್ಯ ಪಿಎಫ್ಐ ನಾಯಕರ ಮನೆ ಮೇಲೆ ದಾಳಿ ನಡೆಸಿದೆ.

- Advertisement -

ನಾಯಕರ ಮನೆ ಮೇಲೆ ಎನ್ಐಎ ಅಧಿಕಾರಿಗಳು ದಾಳಿ ನಡೆಸುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಮನೆ ಮುಂಭಾಗ ಪಿಎಫ್ಐ ಕಾರ್ಯಕರ್ತರು ಜಮಾಯಿಸಿದ್ದು, ಗೋ ಬ್ಯಾಕ್ ಎನ್ಐಎ ಘೋಷಣೆ ಕೂಗಿ, ಇದು ಸರಕಾರಿ ದಾಳಿ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಬಜ್ಪೆ ಜೋಕಟ್ಟೆ, ಕಾವೂರು ಕುಳಾಯಿ ಸೇರಿದಂತೆ ನಗರದ ಹಲವೆಡೆ Sdpi ನಾಯಕರ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಏಕಕಾಲಕ್ಕೆ ವಿವಿಧ ವಾಹನಗಳಲ್ಲಿ ಆಗಮಿಸಿ ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ, ವಿಷಯ ತಿಳಿಯುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಜಮಾಯಿಸಿ ಎನ್ ಐಎ ವಿರುದ್ಧ ಗೋ ಬ್ಯಾಕ್ ಘೋಷಣೆ ಕೂಗುತ್ತಿದ್ದಾರೆ.

ಉಪ್ಪಿನಂಗಡಿ, ಬೋಳಂತೂರುನಲ್ಲಿಯೂ ದಾಳಿ ನಡೆದ ಬಗ್ಗೆ ವರದಿಯಾಗಿದೆ.

Join Whatsapp