INDIA ಒಕ್ಕೂಟದಿಂದ ಟಿವಿ ನಿರೂಪಕರ ಕಾರ್ಯಕ್ರಮ ಬ್ಯಾನ್: ಇಲ್ಲಿದೆ ಪಟ್ಟಿ

Prasthutha|

ನವದೆಹಲಿ: ಇಂಡಿಯಾ ಒಕ್ಕೂಟದ ನಾಯಕರು ಕೆಲ ಟಿವಿ ಕಾರ್ಯಕ್ರಮಗಳು ಮತ್ತು ನಿರೂಪಕರ ಕಾರ್ಯಕ್ರಮದಲ್ಲಿ ಭಾಗವಹಿಸದೆ ಬಹಿಷ್ಕಾರ ಹಾಕಲು ಸಮನ್ವಯ ಸಮಿತಿಯ ಸಭೆಯಲ್ಲಿ ನಿರ್ಧರಿಸಿದ್ದಾರೆ.

- Advertisement -


ಇಂಡಿಯಾ ಒಕ್ಕೂಟದ ಮಾಧ್ಯಮ ವಿಭಾಗದ ಸಭೆ ನಡೆದಿದ್ದು, ದೇಶದ ಪ್ರಮುಖ ಸುದ್ದಿ ಸಂಸ್ಥೆಗಳ ಪತ್ರಕರ್ತರು, ಸಂಪಾದಕರು, ನಿರೂಪಕರು ನಡೆಸಿಕೊಡುವ ಶೋಗಳಿಗೆ ಇಂಡಿಯಾ ಒಕ್ಕೂಟದ ಪಕ್ಷಗಳ ಪ್ರತಿನಿಧಿಗಳನ್ನು ಕಳುಹಿಸುವುದಿಲ್ಲ ಎಂದು ಪ್ರಕಟಣೆ ಹೊರಡಿಸಿದೆ. ಎಐಸಿಸಿ ಮಾಧ್ಯಮ ಘಟಕದ ಅಧ್ಯಕ್ಷ ಪವನ್ ಖೇರಾ ಈ ಕುರಿತು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.


ಇಲ್ಲಿದೆ ಪತ್ರಕರ್ತರ ಪಟ್ಟಿ
ಅರ್ನಬ್ ಗೋಸ್ವಾಮಿ (ರಿಪಬ್ಲಿಕ್)
ನಾವಿಕಾ ಕುಮಾರ್ (ಟೈಮ್ಸ್ ನೌ)
ಅದಿತಿ ತ್ಯಾಗಿ (ಜೀ ನ್ಯೂಸ್)
ಅಮನ್ ಚೋಪ್ರಾ (ನ್ಯೂಸ್ 18)
ಆಮಿಷ್ ದೇವಗನ್ (ನ್ಯೂಸ್ 18)
ಆನಂದ್ ನರಸಿಂಹನ್ (ನ್ಯೂಸ್ 18)
ಅಶೋಕ್ ಶ್ರೀವಾಸ್ತವ್ (ಡಿಡಿ ನ್ಯೂಸ್)
ಸುಧೀರ್ ಚೌಧರಿ (ಆಜ್ ತಕ್)
ಚಿತ್ರಾ ತ್ರಿಪಾಠಿ (ಆಜ್ ತಕ್)
ರುಬಿಕಾ ಲಿಯಾಕತ್ (ಭಾರತ್ 24)
ಗೌರವ್ ಸಾವಂತ್ (ಇಂಡಿಯಾ ಟುಡೇ)
ಶಿವ್ ಅರೂರ್ (ಇಂಡಿಯಾ ಟುಡೇ)
ಪ್ರಾಚಿ ಪರಾಶರ್ (ಇಂಡಿಯಾ ಟಿವಿ)
ಸುಶಾಂತ್ ಸಿನ್ಹಾ (ಟೈಮ್ಸ್ ನೌ ನವಭಾರತ್)

- Advertisement -

Join Whatsapp