ಟೆಂಪೋ- ಲಾರಿ ಅಪಘಾತ: ಮೂವರು ಸ್ಥಳದಲ್ಲೇ ಸಾವು

Prasthutha|

ಪುಣೆ: ಐಸರ್ ಟೆಂಪೋ ಲಾರಿಯೊಂದಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಅಪಘಾತದಲ್ಲಿ ಟೆಂಪೋ ಮಾಲೀಕ, ಚಾಲಕ ಮತ್ತು ಕ್ಲೀನರ್ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಲ್ಲಿನ ಪುಣೆ – ಬೆಂಗಳೂರು ಹೆದ್ದಾರಿಯಲ್ಲಿ ಬುಧವಾರ ರಾತ್ರಿ ನಡೆದಿದೆ.

- Advertisement -


ಮೃತರನ್ನು ಮಂಜುನಾಥ ಯಲ್ಲಪ್ಪ ಕವಲಿ, ಆನಂದ ಗುರುಸಿದ್ಧ ಗಂಗೈ ( ಇಬ್ಬರೂ ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಪಾಮಲ್ ದಿನಿಯ ನಿವಾಸಿಗಳು ) ನಾಯಿಕಪ್ಪ ಸತ್ಯಪ್ಪ ನಾಯ್ಕರ್ ( ರಾಮದುರ್ಗದ ಉಜ್ಜನಕೋಪ್ಪ ನಿವಾಸಿ) ಎಂಬುದು ತಿಳಿದು ಬಂದಿದೆ.


ಮೂವರೂ ಬೆಳಗಾವಿ ಜಿಲ್ಲೆಯವರು. ಬುಧವಾರ ರಾತ್ರಿ ಸತಾರಾ – ಖಂಡಾಲಾ ತಾಲೂಕಿನ ಧನಗರವಾಡಿ (ಈಗ ಖಂಡಾಲಾ) ಗ್ರಾಮದ ವ್ಯಾಪ್ತಿಯ ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಐಸರ್ ಟೆಂಪೋ ಹಿಂದಿನಿಂದ ಲಾರಿಗೆ ಡಿಕ್ಕಿ ಹೊಡೆದಿದೆ.

Join Whatsapp