ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ನಿಯಂತ್ರಣಕ್ಕೆ ಸರ್ಕಾರ ಕ್ರಮ: ಪ್ರಿಯಾಂಕ್ ಖರ್ಗೆ

Prasthutha|

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ನಿಯಂತ್ರಣಕ್ಕೆ ಸರ್ಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಸಾಮಾಜಿಕ ಜಾಲತಾಣ ಗಳಲ್ಲಿ ಬರುವ ವಿಚಾರಗಳು ಸತ್ಯ ಅಥವಾ ಸುಳ್ಳು ಎಂಬುದಷ್ಟೇ ನಾವು ಹೇಳಲು ಹೊರಟಿದ್ದೇವೆ. ಯಾವುದೇ ಹೊಸ ಕಾನೂನು, ಅಥವಾ ಮಸೂದೆ ತರಲು ಹೊರಟಿಲ್ಲ ಎಂದರು.

‘ಇರುವ ಕಾನೂನಿನಲ್ಲಿ ಸತ್ಯ ಅಥವಾ ಸುಳ್ಳು ಎಂಬುದನ್ನು ನಾವು ತಿಳಿಸಲು ಹೊರಟಿದ್ದೇವೆ ಅಷ್ಟೇ, ಪ್ರಧಾನ ಮಂತ್ರಿಗಳೇ ಒಂದು ಟ್ವೀಟ್ ಮಾಡಿದ್ದಾರೆ. ‘ಸುಳ್ಳು ಸುದ್ದಿಗಳ ಸತ್ಯಾನ್ವೇಷಣೆ ಕಡ್ಡಾಯ ಎಂದು. ಇದು ಪ್ರಧಾನ ಮಂತ್ರಿಗಳ ಕಛೇರಿ ಟ್ವೀಟ್. ಚೀಫ್ ಜಸ್ಟೀಸ್ ಆಫ್ ಇಂಡಿಯಾ ಚಂದ್ರಚೂಡ್ ಅವರ ಅಭಿಪ್ರಾಯ ಕೂಡ ಹೌದು, ಸುಳ್ಳು ಸುದ್ದಿಯಿಂದ ಜನ ದಿಕ್ಕುತಪ್ಪಿದ್ರೆ, ಪ್ರಜಾಪ್ರಭುತ್ವದ ಉಳಿವಿಗೆ ಮಾರಕ ಎಂಬ ಮಾತನ್ನು ಹೇಳಿದ್ದಾರೆ ೆಂರು

Join Whatsapp