ಶಿರಡಿ ವಸ್ತ್ರ ಸಂಹಿತೆ ಫಲಕ ತೆರವುಗೊಳಿಸಲು ತೆರಳುತ್ತಿದ್ದ ತೃಪ್ತಿ ದೇಸಾಯಿ ಬಂಧನ

Prasthutha|

ಪುಣೆ : ಶಿರಡಿಗೆ ತೆರಳುತ್ತಿದ್ದ ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ಹಾಗೂ ಅವರ ನೇತೃತ್ವದ ಭೂಮಾತಾ ಬ್ರಿಗೇಡ್ ನ ಹಲವು ಸದಸ್ಯರನ್ನು ಅಹಮದ್ ನಗರದಲ್ಲಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.

- Advertisement -

ಶಿರಡಿಯ ಸಾಯಿಬಾಬಾ ಮಂದಿರದಲ್ಲಿ ಭಕ್ತರು ಸುಸಂಸ್ಕೃತ ರೀತಿಯಲ್ಲಿ ವಸ್ತ್ರ ಧರಿಸಬೇಕು ಎಂಬ ಫಲಕ ಧರಿಸಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಲು ಮುಂದಾಗಿರುವ ತೃಪ್ತಿ ದೇಸಾಯಿ, ತಮ್ಮ ಬೆಂಬಲಿಗರೊಂದಿಗೆ ಶಿರಡಿಗೆ ತೆರಳುವ ಸಿದ್ಧತೆಯಲ್ಲಿದ್ದರು.

ವಿವಾದಾತ್ಮಕ ಸಂದೇಶವನ್ನು ಹೊಂದಿರುವ ಫಲಕವನ್ನು ಕೂಡಲೇ ತೆಗೆದು ಹಾಕಬೇಕು. ತಪ್ಪಿದಲ್ಲಿ ಡಿ.10ರಂದು ಸಂಘಟನೆಯ ಸದಸ್ಯರೊಂದಿಗೆ ತೆರಳಿ ಆ ಫಲಕವನ್ನು ತೆರವು ಮಾಡುವುದಾಗಿ ದೇಸಾಯಿ ಮೊದಲೇ ತಿಳಿಸಿದ್ದರು.

- Advertisement -

ಈ ಹಿನ್ನೆಲೆಯಲ್ಲಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಗೋವಿಂದ ಶಿಂಧೆ ನೋಟಿಸ್ ನೀಡಿ, ಡಿ.8ರಿಂದ 11 ರ ವರೆಗೆ ಅಹ್ಮದ್ ನಗರ ಜಿಲ್ಲೆಯ ಶಿರಡಿ ಪಟ್ಟಣವನ್ನು ಪ್ರವೇಶಿಸಬಾರದು ಎಂದು ದೇಸಾಯಿಗೆ ಸೂಚಿಸಿದ್ದರು.

Join Whatsapp