ರೈತ ಚಳವಳಿ | ಕಾನೂನು ಹಿಂಪಡೆಯದೆ, ಪ್ರತಿಭಟನೆ ಕೊನೆಗೊಳಿಸಲು ಸಾಧ್ಯವಿಲ್ಲ : ಬಿಕೆಯು ಮುಖಂಡ ರಾಕೇಶ್ ಟಿಕಾಯತ್

Prasthutha|

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರದ ನೂತನ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯದೆ, ತಾವು ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಭಾರತೀಯ ಕಿಸಾನ್ ಸಂಘ ಮತ್ತೆ ಪುನರುಚ್ಚರಿಸಿದೆ.

ಸರಕಾರ ವಿಷಯ ಇತ್ಯರ್ಥಗೊಳಿಸುವ ಬದಲು, ಕೇವಲ ಪ್ರತಿಭಟನೆ ಕೊನೆಗೊಳಿಸುವುದರಲ್ಲಿ ಆಸಕ್ತವಾಗಿದೆ ಎಂದು ಬಿಕೆಯು ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ.  

- Advertisement -

“ಸರಕಾರ ಕಾನೂನನ್ನು ತಿದ್ದುಪಡಿ ಮಾಡಲು ಬಯಿಸಿದೆ. ಆದರೆ, ನಾವು ಈ ಕಾನೂನುಗಳನ್ನು ಹಿಂಪಡೆಯಬೇಕೆಂದು ಬಯಸಿದ್ದೇವೆ. ನಮಗೆ ಬದಲಾವಣೆ ಬೇಕಾಗಿಲ್ಲ. ಈ ಕಾನೂನುಗಳನ್ನು ಹಿಂದಕ್ಕೆ ಪಡೆದಾಗ ಮಾತ್ರ ನಾವು ಪ್ರತಿಭಟನೆ ಕೊನೆಗೊಳಿಸುತ್ತೇವೆ” ಎಂದು ಟಿಕಾಯತ್ ಹೇಳಿದ್ದಾರೆ.

ಪ್ರಧಾನಿ ಮೋದಿ ಸರಕಾರದ ವಿರುದ್ಧದ ರೈತರ ಪ್ರತಿಭಟನೆ ಇಂದಿಗೆ 15ನೇ ದಿನಕ್ಕೆ ಕಾಲಿಟ್ಟಿದೆ.

- Advertisement -