ಜಾರ್ಖಂಡ್ | ಗಂಡನನ್ನು ಒತ್ತೆ ಸೆರೆ ಹಿಡಿದು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ; ಓರ್ವನ ಬಂಧನ

Prasthutha|

ದುಮ್ಕಾ : ಜಾರ್ಖಂಡ್ ನ ದುಮ್ಕಾ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಮಹಿಳೆಯೊಬ್ಬರ ಮೇಲೆ ಗುಂಪೊಂದು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ಮಾರುಕಟ್ಟೆಯಿಂದ ಮನೆಗೆ ಹಿಂದಿರುಗುತ್ತಿದ್ದ ದಂಪತಿಯನ್ನು ಅಡ್ಡಗಟ್ಟಿದ ಗುಂಪು ಈ ಕೃತ್ಯ ಎಸಗಿದೆ. ಮಹಿಳೆಯ ಪತಿಯನ್ನು ಒತ್ತೆ ಸೆರೆ ಹಿಡಿದು ಅತ್ಯಾಚಾರ ಎಸಗಲಾಗಿದೆ.

ಘಟನೆಗೆ ಸಂಬಂಧಿಸಿ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ. ಇನ್ನುಳಿದ ನಾಲ್ಕೈದು ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.

- Advertisement -

ಸಂತ್ರಸ್ತ ಮಹಿಳೆ ಮುಫಾಸಿಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಐದು ಮಕ್ಕಳ ತಾಯಿಯಾದ ಮಹಿಳೆ ತನ್ನ ತವರು ಮನೆಗೆ ಭತ್ತದ ಕೊಯ್ಲಿನಲ್ಲಿ ಸಹಕರಿಸುವುದಕ್ಕಾಗಿ ಕೆಲವು ದಿನಗಳ ಹಿಂದೆ ಆಗಮಿಸಿದ್ದ ವೇಳೆ ಘಟನೆ ನಡೆದಿದೆ.

ಮಹಿಳೆಯ ಮೇಲೆ 17 ಮಂದಿಯಿಂದ ಅತ್ಯಾಚಾರ ನಡೆದಿದೆ ಎಂಬ ವರದಿಗಳನ್ನು ಸ್ಥಳೀಯ ಪೊಲೀಸ್ ಅಧಿಕಾರಿ ನಿರಾಕರಿಸಿದ್ದಾರೆ. ಓರ್ವನನ್ನು ಬಂಧಿಸಲಾಗಿದೆ, ಇನ್ನುಳಿದವರ ಪತ್ತೆಗೆ ಪ್ರಯತ್ನಿಸಲಾಗುತ್ತಿದೆ ಎಂದು ಡಿಐಜಿ ಸಂಥಾಲ್ ಪರಗಣ ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ಜಾರ್ಖಂಡ್ ಡಿಜಿಪಿ ಅವರಿಂದ ಘಟನೆಗೆ ಸಂಬಂಧಿಸಿ ವರದಿ ಕೇಳಿದೆ.

- Advertisement -