ಇಸ್ರೇಲ್ – ಫೆಲೆಸ್ತೀನ್ ವಿವಾದಕ್ಕೆ ಶಾಶ್ವತ ಪರಿಹಾರ । ಟ್ರಂಪ್ ಜೊತೆ ಮಾತುಕತೆಯಲ್ಲಿ ಸೌದಿ ದೊರೆ ಸಲ್ಮಾನ್

Prasthutha: September 8, 2020
Salman Trump

ಇಸ್ರೇಲ್ – ಫೆಲೆಸ್ತೀನ್  ನಡುವೆ ಇರುವ ವಿವಾದ ಹಾಗೂ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ನಾವು ಉತ್ಸುಕರಾಗಿದ್ದೇವೆ ಎಂದು ಸೌದಿ ದೊರೆ ಸಲ್ಮಾನ್ ಅವರು ಅಮೆರಿಕಾದ ಅಧ್ಯಕ್ಷ ಟ್ರಂಪ್ ಜೊತೆಗಿನ ಟೆಲಿಫೋನ್ ಮಾತುಕತೆಯ ವೇಳೆ ಹೇಳಿದ್ದಾರೆಂದು ಸೌದಿ ಪ್ರೆಸ್ ಏಜನ್ಸಿ ವರದಿ ಮಾಡಿದೆ.

ಇಸ್ರೇಲ್ ಜೊತೆಗಿನ ಅರಬ್ ರಾಷ್ಟ್ರಗಳ ಸಂಬಂಧ ಸಹಜ ಸ್ಥಿತಿಗೆ ತರಬೇಕೆಂಬ ನಿಟ್ಟಿನಲ್ಲಿ ಅಮೆರಿಕಾ ಹಲವು ಅರಬ್ ರಾಷ್ಟ್ರಗಳೊಂದಿಗೆ ಇದೀಗಾಗಲೇ ಮಾತುಕತೆ ನಡೆಸುತ್ತಿದೆ. ಅದರ ಫಲವೆಂಬಂತೆ ಯುಎಇ ಇತ್ತೀಚೆಗೆ ಇಸ್ರೇಲ್ ಜೊತೆಗೆ ತನ್ನ ರಾಜತಾಂತ್ರಿಕ ಸಂಬಂಧಗಳನ್ನು ಪ್ರಾರಭ ಮಾಡಿತ್ತು.

ಟ್ರಂಪ್ ಜೊತೆಗಿನ ಮಾತುಕತೆಯ ವೇಳೆ ಅಮೆರಿಕಾ ಅಧ್ಯಕ್ಷರ ಶಾಂತಿ ಮಾತುಕತೆಗಳ ಪ್ರಯತ್ನಗಳನ್ನು ಶ್ಲಾಘಿಸಿರುವ ದೊರೆ ಸಲ್ಮಾನ್, 2002 ರಲ್ಲಿ ಸೌದಿ ಮಂಡಿಸಿರುವ ಅರಬ್ ಶಾಂತಿ ಯೋಜನೆಯ ಅಡಿಯಲ್ಲಿ ಫೆಲೆಸ್ತೀನ್ ಸಮಸ್ಯೆಗಳಿಗೆ ಶಾಶ್ವತ ಹಾಗೂ ನ್ಯಾಯೋಚಿತ ಪರಿಹಾರ ಒಂದನ್ನು ನಾವು ಬಯಸುತ್ತಿದ್ದೇವೆ ಎಂದು ದೊರೆ ಸಲ್ಮಾನ್ ಟ್ರಂಪ್ ಗೆ ತಿಳಿಸಿದ್ದಾರೆಂದು ವರದಿಯಾಗಿದೆ.

ಸೌದಿಯು ಇಸ್ರೇಲನ್ನು ಒಂದು ರಾಷ್ಟ್ರವೆಂದು ಮಾನ್ಯ ಮಾಡುತ್ತಿಲ್ಲ. ಮಾತ್ರವಲ್ಲ ಅದರೊಂದಿಗೆ ಯಾವುದೇ  ಅಧಿಕೃತ ರಾಜತಾಂತ್ರಿಕ ಸಂಬಂಧಗಳನ್ನು ಕೂಡಾ ಹೊಂದಿಲ್ಲ. ಆದರೆ ಯುಎಇ ಇತ್ತೀಚೆಗೆ ಇಸ್ರೇಲ್ ಜೊತೆಗೆ ತನ್ನ ಸಂಬಂಧವನ್ನು ಸಹಜ ಸ್ಥಿತಿಗೆ ಸ್ಥಾಪಿಸಿದ ಬಳಿಕ ಸೌದಿ ತನ್ನ ವಾಯುಪ್ರದೇಶವನ್ನುಇಸ್ರೇಲ್ – ಯುಎಇ ವಾಣಿಜ್ಯ ವಿಮಾನಗಳ ಹಾರಾಟಕ್ಕೆ ಬಳಸಲು ಅನುಮತಿ ನೀಡುವುದಾಗಿ ಸೌದಿ ಹೇಳಿತ್ತು, ಇವೆಲ್ಲವೂ ಅಮೆರಿಕಾದ ಒತ್ತಾಸೆಯ ಫಲವೆಂದೇ ವಿಶ್ಲೇಷಿಸಲಾಗಿದೆ

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!