ಉಪ್ಪಿನಂಗಡಿ : ಲಾರಿ ಡಿಕ್ಕಿಯಾಗಿ ಯುವಕ ಬಲಿ : ಅಪಘಾತಕ್ಕೀಡಾದ ಬೈಕಿನಲ್ಲಿ ಬಜರಂಗದಳ ಹಂಚಿದ್ದ ಆಯುಧ ಪತ್ತೆ !

Prasthutha|

ಉಪ್ಪಿನಂಗಡಿ ಸಮೀಪದ ಗೋಳಿತೊಟ್ಟುವಿನ ಸಣ್ಣಂಪಾಡಿ ಎಂಬಲ್ಲಿ ವಿರುದ್ಧ ದಿಕ್ಕಿನಲ್ಲಿ ಬಂದ ಮೀನಿನ ಲಾರಿಯೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ .  ಮೃತಪಟ್ಟ ಯುವಕನನ್ನು ಮಂಗಳೂರಿನ ಕುಂಟಲ್ಪಾಡಿ ನಿವಾಸಿ ಸಚಿನ್ (29) ಎಂದು ಗುರುತಿಸಲಾಗಿದೆ. ಬೈಕಿನಲ್ಲಿದ್ದ ಸಹ ಸವಾರ ಅಂಕಿತ್ ಎಂಬ ಯುವಕ ಕೂಡಾ ಗಂಭೀರವಾಗಿ ಗಾಯಗೊಂಡಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

ಅಪಘಾತಕ್ಕೀಡಾದ ವಾಹನದಲ್ಲಿ ಬಜರಂಗದಳ ಹಂಚಿದ್ದ ತ್ರಿಶೂಲ ಪತ್ತೆ!

ಈ ನಡುವೆ ಅಪಘಾತಕ್ಕೀಡಾದ ಬೈಕಿನಲ್ಲಿ ಇತ್ತೀಚೆಗೆ ಬಜರಂಗದಳ ಹಂಚಿದ್ದ ತ್ರಿಶೂಲ ಆಯುಧ ಪತ್ತೆಯಾಗಿದೆ. ಇದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.  ತ್ರಿಶೂಲ ದೀಕ್ಷೆ ಹೆಸರಿನಲ್ಲಿ ಬಜರಂಗದಳ ಆಯುಧಗಳನ್ನು ಹಂಚಿತ್ತು. ಅದನ್ನು ವಾಹನದಲ್ಲಿ ಇರಿಸಿಕೊಂಡೇ ಈ ಯುವಕರು ಸಾಗುತ್ತಿದ್ದರು ಎನ್ನಲಾಗಿದೆ.  ಪೊಲೀಸ್ ಇಲಾಖೆ ಈ ಕುರಿತು ಹೆಚ್ಚಿನ ತನಿಖೆ ನಡೆಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.



Join Whatsapp