ತ್ರಿವಳಿ ತಲಾಖ್, ಪೋಕ್ಸೋ ತೀರ್ಪು ನೀಡಿದ್ದ ಯು. ಯು. ಲಲಿತ್ ಮುಂದಿನ ಸಿಜೆಐ

Prasthutha|

ನವದೆಹಲಿ: ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಎನ್. ವಿ. ರಮಣ ಅವರು ಹಿರಿಯ ನ್ಯಾಯಾಧೀಶರಾದ ಯು. ಯು. ಲಲಿತ್ ಅವರ ಹೆಸರನ್ನು ಮುಂದಿನ ಸುಪ್ರೀಂ ಕೋರ್ಟ್ ಸಿಜೆಐ ಸ್ಥಾನಕ್ಕೆ ಸೂಚಿಸಿ ಪತ್ರ ಬರೆದಿದ್ದಾರೆ.

- Advertisement -

ಜಸ್ಟಿಸ್ ಯು. ಯು. ಲಲಿತ್ ಸಿಜೆಐ ಆದಲ್ಲಿ ಬಾರ್ ಕೌನ್ಸಿಲ್ ನಿಂದ ನೇರ ಸುಪ್ರೀಂ ಕೋರ್ಟಿಗೆ ನೇಮಕರಾದವರಲ್ಲಿ ಸಿಜೆಐ ಆಗುವ ಎರಡನೆಯವರಾಗಿರುತ್ತಾರೆ. 1971ರಲ್ಲಿ 13ನೇ ಸಿಜೆಐ ಆಗಿದ್ದ ಎಸ್. ಎಂ. ಸಿಕ್ರಿಯವರು ಬಾರ್ ಕೌನ್ಸಿಲ್ ನಿಂದ ನೇರವಾದವರಲ್ಲಿ ಮೊದಲಿಗರು. ಅವರು 1964ರಲ್ಲಿ ನೇರ ವಕೀಲಿಕೆಯಿಂದ ಸುಪ್ರೀಂ ಕೋರ್ಟಿಗೆ ನೇಮಕಗೊಂಡಿದ್ದರು.

ತ್ರಿವಳಿ ತಲಾಖ್ ಸಹಿತ ಕೆಲವು ವಿಶೇಷ ಪ್ರಕರಣಗಳಲ್ಲಿ ಜಸ್ಟಿಸ್ ಯು. ಯು. ಲಲಿತ್ ತೀರ್ಪು ನೀಡಿದ್ದಾರೆ.

- Advertisement -

ಐವರು ಜಡ್ಜ್ ಗಳ ವಿಶೇಷ ಪೀಠದ ಮೂಲಕ 2017ರ ಆಗಸ್ಟ್ ನಲ್ಲಿ ತ್ರಿವಳಿ ತಲಾಖ್ ವಿರುದ್ಧ ತೀರ್ಪು ಬಂದಿತ್ತು. ಜಸ್ಟಿಸ್ ಗಳಾದ ಯು. ಯು. ಲಲಿತ್, ಕುರಿಯನ್ ಜೋಸೆಫ್, ಆರ್. ಎಫ್. ನಾರಿಮನ್ ಅವರುಗಳು ತ್ರಿವಳಿ ತಲಾಖ್ ಸಂವಿಧಾನ ಬಾಹಿರ ಎಂದು ತೀರ್ಪು ನೀಡಿದ್ದರು. ಆಗ ಮುಖ್ಯ ನ್ಯಾಯಾಧೀಶರಾಗಿದ್ದ ಜೆ. ಎಸ್. ಖೇಹರ್ ಮತ್ತು ಎಸ್. ಅಬ್ದುಲ್ ನಜೀರ್ ಅವರು ಹೊಸ ಕಾನೂನು ಬರುವವರೆಗೆ ಆರು ತಿಂಗಳ ಕಾಲ ಪ್ರಕರಣವನ್ನು ಕಾದಿಡುವ ತೀರ್ಮಾನ ಪ್ರಕಟಿಸಿದ್ದರು.

ಪೋಕ್ಸೋ ಪ್ರಕರಣ ಕೂಡ ಯು. ಯು. ಲಲಿತ್ ಹೆಸರು ಹೆಚ್ಚು ಬೆಳಕಿಗೆ ಬರುವಂತೆ ಮಾಡಿತ್ತು. ಲಲಿತ್ ಅವರು ಈ ಪ್ರಕರಣ ವಿಚಾರಣೆ ನಡೆಸುತ್ತಿದ್ದ ಪೀಠದ ಮುಖ್ಯಸ್ಥರಾಗಿದ್ದರು. ಪೋಕ್ಸೋ- ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ ಸೆಕ್ಷನ್ 7ರಂತೆ ಮಕ್ಕಳ ಯಾವುದೇ ರತಿ ಭಾಗ ಇಲ್ಲವೇ ಇತರ ಭಾಗವನ್ನು ಕೆಟ್ಟ ಭಾವದಿಂದ ಬಟ್ಟೆಯ ಮೇಲೆ ಮುಟ್ಟುವುದು ಕೂಡ ಅಪರಾಧ ಎಂದು ತೀರ್ಪು ನೀಡಿದ್ದರು. ಚರ್ಮಕ್ಕೆ ಚರ್ಮ ತಾಗಬೇಕು ಎಂದಿಲ್ಲ; ಲೈಂಗಿಕ ಕಾಮನೆಯ ಸ್ಪರ್ಶ ಸಹ ಲೈಂಗಿಕ ಅಪರಾಧವಾಗಿದೆ ಎಂದು ಜಸ್ಟಿಸ್ ಲಲಿತ್ ತೀರ್ಪು ನೀಡಿದ್ದರು.

Join Whatsapp