ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜನರಿಗೆ ಮಲ್ಲಿಗೆ ದರ ಶಾಕ್ ನೀಡಿದ್ದು, ಒಂದು ಅಟ್ಟಿ ಮಲ್ಲಿಗೆ 2500 ತನಕ ತಲುಪಿದೆ.
ಸಾಲು ಸಾಲು ಹಬ್ಬಗಳ ಸಂಭ್ರಮದಲ್ಲಿರುವ ಕರಾವಳಿಗರಿಗೆ ಮಲ್ಲಿಗೆ ದರ ಶಾಕ್ ನೀಡಿದೆ. ಶಂಕರಪುರ ಮಲ್ಲಿಗೆಯ ದರ ಅಟ್ಟಿಗೆ 2100 ರೂಪಾಯಿ ನಿಗದಿಯಾಗಿದ್ದು, 2500 ರೂಪಾಯಿ ತನಕ ಮಾರಾಟವಾಗುತ್ತಿದೆ.
ಇನ್ನು ಮಂಗಳೂರು ಮಲ್ಲಿಗೆ ಮಂಗಳೂರಿನಲ್ಲೇ ದುಬಾರಿಯಾಗಿದೆ. ಕಳೆದ ತಿಂಗಳು ಒಂದು ಅಟ್ಟಿಗೆ 400 ರೂ, ಇತ್ತು. ಆದರೆ ಈಗ ಮಲ್ಲಿಗೆ ದರ 2000ದಿಂದ 2400 ರೂ, ತಲುಪಿದೆ.
ಹಬ್ಬಗಳು, ಮದುವೆಗಳು ಆರಂಭವಾಗಿರುವುದರಿಂದ ಹೂವಿನ ಬೇಡಿಕೆ ಹೆಚ್ಚುವುದು ಸಹಜ. ಈ ಕಾರಣಕ್ಕೆ ದರದಲ್ಲಿ ಭಾರಿ ಏರಿಕೆಯಾಗಿದೆ ಎಂದು ಹೂವಿನ ವ್ಯಾಪಾರಿಗಳು ತಿಳಿಸಿದ್ದಾರೆ.
ಮಲ್ಲಿಗೆ ದರ ಹೆಚ್ಚಿದ್ದರೂ ಬೇಡಿಕೆ ಕಡಿಮೆಯಾಗಿಲ್ಲ ಎಂದು ಪುತ್ತೂರಿನ ಹೂವಿನ ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ.